ನವೀನ್ ಮೃತದೇಹ ತಂದಿದ್ರಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ-ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಉಕ್ರೇನ್-ರಷ್ಯಾ ಯುದ್ಧದಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಶೆಲ್ ದಾಳಿ ವೇಳೆ ಮೃತಪಟ್ಟಿದ್ರು. ಸತತ ಇಪ್ಪತ್ತು ದಿನಗಳಿಂದ ಮೃತದೇಹ ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನಿಸಿದ ಅದರ ಫಲವಾಗಿ ಇಂದು ರಾಜ್ಯಕ್ಕೆ ನವೀನ್ ಮೃತದೇಹ ಬಂದು ತಲುಪಿದೆ. ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಮಾತಿನ ಚಕಮಕಿ ನಡೆದಿದ್ದು, ನವೀನ್ ಮೃತದೇಃ ತಂದಿದ್ದರಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ನವೀನ್ ಸಾವನ್ನಪ್ಪಿ 22 ದಿನ ಕಳೆದಿದೆ. ಅವರ ಪೋಷಕರಿಗೆ ಅಂದಿನಿಂದ ಅರಣ್ಯರೋದನ ಆಗಿದೆ. ಯುದ್ಧದ ವೇಳೆ ಯಾರೂ ಉಕ್ರೇನ್ ಒಳಹೋಗಲು ಆಗಿಲ್ಲ. ವಿದ್ಯಾರ್ಥಿಗಳೇ ಅವರ ಸ್ವತಃ ರಿಸ್ಕ್ ತೆಗೆದುಕೊಂಡು ಹೊರಗೆ ಬಂದಿದ್ದಾರೆ. ಸಾವಿರ ಸಾವಿರ ವಿದ್ಯಾರ್ಥಿಗಳು ಉಕ್ರೇನ್‌ಗೆ ಹೋಗಿದ್ದು ಯಾಕೆ..? ನಮ್ಮ ದೇಶದಲ್ಲಿ ಕೈಗೆಟುಕುವ ಶಿಕ್ಷಣ ಯಾಕೆ ಕೊಡಬಾರ್ದು..?ಎಂದು ವಿಧಾನ ಪರಿಷತ್‌ನಲ್ಲಿ ಬಿ.ಕೆ.ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.