ದಲಿತರಿಗೆ ವಂಚನೆ ಆರೋಪ; ಸಚಿವ ಡಿ.ಸುಧಾಕರ್ ಮಹಿಳೆ ಆವಾಜ್ ಹಾಕಿದ ವಿಡಿಯೋ ವೈರಲ್
ಬೆಂಗಳೂರು; ಮಹಿಳೆಯೊಬ್ಬರಿಗೆ ಸಚಿವ ಡಿ.ಸುಧಾಕರ್ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ನಾನು ಆಂಧ್ರದಲ್ಲಿ ಮಚ್ಚು ಹಿಡ್ಕೊಂಡು ತಿರುಗಾಡಿದ್ದೆ. ನನಗೆ ಯಲಹಂಕ ದೊಡ್ಡದೇನಲ್ಲ. ಬಾರಲೇ ನಾನು ಅಲ್ಲಿಗೇ ಬರ್ತೀನಿ ಎಂದು ಡಿ.ಸುಧಾಕರ್ ಆವಾಜ್ ಹಾಕಿದ್ದಾರೆ. ಜಾಗವೊಂದರ ಕಬಳಿಕೆ ವಿಚಾರದ ಸಂಬಂಧ ಡಿ.ಸುಧಾಕರ್ ಈ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಸಚಿವ ಡಿ.ಸುಧಾಕರ್ ಅವರು ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್‌ನ ಪಾಲುದಾರರು. ಈ ಸಂಸ್ಥೆ ಮೂಲಕ ಯಲಹಂಕ ಗ್ರಾಮದ ಸರ್ವೆ ನಂಬರ್ 108/1ರ 1.30 ಎಕರೆ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಸಂಬಂಧ ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವವರು ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಸುಧಾಕರ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸುಧಾಕರ್ ಅವರು ಆ ಮಹಿಳೆಗೆ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಜಾಗದ ಪ್ರಕರಣ ಕೋರ್ಟ್‌ನಲ್ಲಿದೆ. ಹೀಗಿದ್ದರೂ, ಸಚಿವರು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.