BengaluruPolitics

ವಿದ್ಯಾರ್ಥಿಯಾಗಿದ್ದಾಗಲೇ ವಿಧಾನಸಭೆಗೆ ಸ್ಪರ್ಧೆ; ಚಿನ್ನ ಅಡ ಇಟ್ಟು ಚುನಾವಣೆ ಎದುರಿಸಿದ್ದ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಡಿ.ಕೆ.ಶಿವಕುಮಾರ್‌ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅವರು ಹಲವು ಕುತೂಹಲದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಬಂದಿದ್ದರ ಬಗ್ಗೆ. ಮೊದಲ ಚುನಾವಣೆಯಲ್ಲೇ ಮುತ್ಸದ್ದಿ ರಾಜಕಾರಣಿ ವಿರುದ್ಧ ಸ್ಪರ್ಧೆ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್‌ ಇನ್ನೂ ಡಿಗ್ರಿ ಫೈನಲ್‌ ಇಯರ್‌ ಓದುತ್ತಿರುವಾಗಲೇ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿತ್ತಂತೆ. ಅದೂ ಕೂಡಾ ದೇವೇಗೌಡರ ವಿರುದ್ಧ ಸ್ಪರ್ಧೆ. ತಾಯಿ ಹಾಗೂ ಸಹೋದರಿಯ ಆಭರಣಗಳನ್ನೆಲ್ಲಾ ಮಾರಿ ಅವರು ಚುನಾವಣೆ ಎದುರಿಸಿದ್ದರು. ಆದ್ರೆ, ಆ ಚುನಾವಣೆಯಲ್ಲಿ ಅವರು ಸೋತರು.

ಅನಂತರ ಸಾತನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದರು. ಇನ್ನು 1989ರಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಿ ವಿಧಾನಸಭೆಗೆ ಪ್ರವೇಶ ಮಾಡಿದರು. ಮೊದಲ ಬಾರಿ ಶಾಸಕರಾದಾಗಲೇ ಅವರು ಮಂತ್ರಿಯೂ ಆಗಿದ್ದರು. ಆದ್ರೆ 1994ರ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಿಲ್ಲ. ಹೀಗಾಗಿ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು. ನಂತರ 1999ರಲ್ಲಿ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು. ಹೀಗಾಗಿ, ಹಲವು ಕುತೂಹಲದ ವಿಷಯಗಳನ್ನು ಡಿ.ಕೆ.ಶಿವಕುಮಾರ್‌ ಹಂಚಿಕೊಂಡಿದ್ದಾರೆ.

Share Post