National

ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ; ಸಿಬ್ಬಂದಿ ಹೊಸ ಸಮವಸ್ತ್ರ

ನವದೆಹಲಿ; ಸೆಪ್ಟೆಂಬರ್‌ 18 ರಿಂದ ಸಂಸತ್‌ ವಿಶೇಷ ಅಧಿವೇಶನ ನಡೆಯಲಿದೆ. ಒಂದು ದಿನದ ನಂತರ ಹೊಸ ಕಟ್ಟಡದಲ್ಲಿ ಕಲಾಪ ಮುಂದುವರೆಯಲಿದೆ. ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌ ಆಗುತ್ತಿರುವುದರಿಂದ ಸಂಸತ್‌ ಸಿಬ್ಬಂದಿಯ ಸಮವಸ್ತ್ರ ಬದಲಾವಣೆ ಮಾಡಲಾಗಿದೆ. 

ಸೆಪ್ಟೆಂಬರ್‌ 19ರಂದು ಗಣೇಶ ಹಬ್ಬವಿದ್ದು, ಅಂದು ಪೂಜೆ ಸಲ್ಲಿಸಿ ಹೊಸ ಸಂಸತ್‌ ಭವನದಲ್ಲಿ ಕಲಾಪ ಮುಂದುವರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಬದಲಿಸಲಾಗಿದೆ. ಮಾರ್ಷಲ್​ಗಳಿಗೆ ಕುರ್ತಾ, ಭದ್ರತಾ ಅಧಿಕಾರಿಗಳಿಗೆ ಹೊಸ ಸಮವಸ್ತ್ರ, ಮಹಿಳಾ ಉದ್ಯೋಗಿಗಳಿಗೆ ಹೊಸ ವಿನ್ಯಾಸದ ಸೀರೆಯನ್ನು ಸಮವಸ್ತ್ರವಾಗಿ ವಿತರಿಸಲಾಗಿದೆ.

ಮಾರ್ಷಲ್‌ಗಳಿಗೆ ಈ ಮೊದಲು ಸಫಾರಿ ಸೂಟ್‌ ಇತ್ತು. ಈಗ ಅದರ ಬದಲಾಗಿ ಕುರ್ತಾ ಪೈಜಾಮಾ ಧರಿಸುತ್ತಾರೆ. ಇನ್ನು ತಲೆಯ ಮೇ ಟರ್ಬನ್‌ ಧರಿಸುತ್ತಿದ್ದರು. ಈಗ ಅದರ ಬದಲಿಗೆ ಮಣಿಪುರಿ ಟೋಪಿ ಧರಿಸಲಿದ್ದಾರೆ. ಇನ್ನು ಐದು ಇಲಾಖೆಗಳ ಅಧಿಕಾರಿಗಳು ತಿಳಿ ನೀಲಿ ಬಣ್ಣದ ಸೂಟ್‌ ಧರಿಸುತ್ತಿದ್ದರು. ಆದ್ರೆ ಈಗವರು, ಕಮಲಚಿತ್ರವಿರುವ ಬಟ್ಟೆ ಧರಿಸಲಿದ್ದಾರೆ.

 

Share Post