BengaluruCrime

ಮಳೆ ನೀರು ನುಗ್ಗಿದ ಮನೆಗಳಲ್ಲಿ ಕಳ್ಳರ ಕೈಚಳಕ; ದೋಚಿದ್ದೆಷ್ಟು ಗೊತ್ತಾ..?

ಬೆಂಗಳೂರು; ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದಾಗಿ ರೈನ್‌ ಬೋ ಲೇಔಟ್‌ನ ಬಹುತೇಕ ನಿವಾಸಿಗಳು ಬೇರೆಡೆ ಸ್ಥಳಾಂತರವಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ರೈನ್‌ಬೋ ಲೇಔಟ್‌ನಲ್ಲಿ ಸರಣಿ ಕಳ್ಳತನ ಮಾಡಿದ್ದಾರೆ. 

   ಮಳೆಯಿಂದ ಮುಳುಗಡೆಗೊಂಡಿದ್ದ ರೈನ್​ಬೋ ಲೇಔಟ್​ನಲ್ಲಿ ಸರಣಿ ಕಳ್ಳತನವಾಗಿದ್ದು, ಮೂರು ಮನೆಗಳಲ್ಲಿ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು, ಮಳೆಯಿಂದಾಗಿ ಇಡೀ ಲೇಔಟ್​ನಲ್ಲಿ ನೀರು ನುಗ್ಗಿ ಜನ ಪರದಾಡ್ತಿದ್ದಾರೆ. ಮಳೆ ಹಿನ್ನೆಲೆ ಇಡೀ ಲೇಔಟ್​ನಲ್ಲಿ ಕರೆಂಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್​ ಅಭಾವದಿಂದ ಸಿಸಿಟಿವಿ ಕೂಡ ತಮ್ಮ ಕಾರ್ಯವನ್ನು ನಿಲ್ಲಿಸಿವೆ. ಸಾಲದಕ್ಕೆ ಸಾಕಷ್ಟು ಜನ ಮನೆ ಬಿಟ್ಟು ಬೇರೆಡೆ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

Share Post