BengaluruEconomyPolitics

ಸಿದ್ದರಾಮಯ್ಯ ಅವರು ಹೇಳೋ ಪ್ರಕಾರ ಯಾರು ಎಷ್ಟು ಸಾಲ ಮಾಡಿದ್ದಾರೆ..?

ಬೆಂಗಳೂರು; ಕಾಂಗ್ರೆಸ್‌ ಉಚಿತ ಭರವಸೆಗಳಿಂದ ಸರ್ಕಾರವನ್ನು ಸಾಲದ ಸುಳಿಯಲ್ಲಿ ಸಿಲುಕಿಸಲಾಗುತ್ತದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆದ್ರೆ, ಬಿಜೆಪಿಯವರ ಕಾಲದಲ್ಲೇ ಹೆಚ್ಚು ಸಾಲ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಅದಕ್ಕೆ ಲೆಕ್ಕವನ್ನೂ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಕೊಟ್ಟ ಸಾಲದ ವಿವರ ಇಲ್ಲಿದೆ;

ಕೇಂದ್ರ ಸರ್ಕಾರ;

ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ಕೇಂದ್ರ ಸರ್ಕಾರ ಒಟ್ಟು ಸಾಲ – 52 ಲಕ್ಷದ 11 ಸಾವಿರ ಕೋಟಿ ರೂಪಾಯಿ

ಸದ್ಯ ಇರುವ ದೇಶದ ಒಟ್ಟು ಸಾಲ – 155 ಲಕ್ಷ ಕೋಟಿ ರೂಪಾಯಿ

ಮೋದಿ ಪ್ರಧಾನಿಯಾದ ಮೇಲೆ 9 ವರ್ಷಗಳಲ್ಲಿ ಮಾಡಿರುವ ಸಾಲ – 102 ಲಕ್ಷ ಕೋಟಿ ರೂಪಾಯಿ

 

ರಾಜ್ಯ ಸರ್ಕಾರ ಮಾಡಿರುವ ಸಾಲವೆಷ್ಟು..?

ಸ್ವಾತಂತ್ರ್ಯ ಬಂದಾಗಿನಿಂದ 2018ರವೆರೆಗಿನ ರಾಜ್ಯದ ಸಾಲ – 2 ಲಕ್ಷದ 42 ಸಾವಿರ ಕೋಟಿ ರೂಪಾಯಿ

ಸದ್ಯ ಇರುವ ರಾಜ್ಯದ ಒಟ್ಟು ಸಾಲ – 5 ಲಕ್ಷದ 64 ಸಾವಿರ ಕೋಟಿ ರೂಪಾಯಿ

ಕಳೆದ ಐದು ವರ್ಷದಲ್ಲಿ ಮಾಡಿದ ಸಾಲದ ಮೊತ್ತ – 3 ಲಕ್ಷದ 22 ಸಾವಿರ ಕೋಟಿ ರೂಪಾಯಿ

2023-24 ನೇ ವರ್ಷದಲ್ಲೇ 72 ಸಾವಿರ ಕೋಟಿ ರೂಪಾಯಿ ಸಾಲ ಪಡೆಯುತ್ತಿದ್ದಾರೆ

ಸಿದ್ದರಾಮಯ್ಯ ಆಡಳಿತದ 5 ವರ್ಷದಲ್ಲಿ ಮಾಡಿದ ಸಾಲ – 1 ಲಕ್ಷದ 16 ಸಾವಿರ ಕೋಟಿ ರೂಪಾಯಿ

 

ರಾಜ್ಯದಿಂದ ಈ ವರ್ಷದ ಕಟ್ಟಬೇಕಾದ ಅಸಲು ಹಾಗೂ ಬಡ್ಡಿಎ ಷ್ಟು..?

56 ಸಾವಿರ ಕೋಟಿ ರೂಪಾಯಿ

 

Share Post