BengaluruPolitics

ಐದೂ ಗ್ಯಾರೆಂಟಿಗಳಿಗೆ ಸಂಪುಟ ಒಪ್ಪಿಗೆ; ವಾರದೊಳಗೆ ಎಲ್ಲವೂ ಜಾರಿ

ಬೆಂಗಳೂರು; ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಪ್ರಮುಖ ಐದು ಗ್ಯಾರೆಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ನೂತನ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೊದಲ ಸಂಪುಟ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಈ ಹಿಂದೆ ನುಡಿದಂತೆ ನಡೆದುಕೊಂಡಿದ್ದೇವೆ. ಈ ಬಾರಿಯೂ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದೇವೆ. ಅವೆಲ್ಲವನ್ನೂ ಹಂತ ಹಂತವಾಗಿ ಪೂರೈಸುತ್ತೇವೆ. ಆದ್ರೆ, ಐದು ಗ್ಯಾರೆಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲೇ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದೆವು. ಹೀಗಾಗಿ ಐದೂ ಗ್ಯಾರೆಂಟಿಗಳಿಗೆ ಈ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

ಗೃಹಜ್ಯೋತಿ –
೨೦೦ ಯೂನಿಟ್‌ವರೆಗೆ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್‌. ಇದಕ್ಕೆ ೧೨೦೦ ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆ –

ಈ ಯೋಜನೆಯಡಿ ಪ್ರತಿ ಮನೆಯ ಒಡತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡೋದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಅನ್ನಭಾಗ್ಯ  –
ಬಿಪಿಎಲ್‌ ಕಾರ್ಡ್‌ ಕುಟುಂಬದ ಸದಸ್ಯರಿಗೆ ಒಬ್ಬರಿಗೆ ಒಂದು ತಿಂಗಳಿಗೆ ಏಳು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಹತ್ತು ಕೆಜಿಗೆ ಏರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯುವನಿಧಿ –
ಈ ವರ್ಷ ಯಾರು ನಿರುದ್ಯೋಗಿಗಳಾಗುತ್ತಾರೆ ಅವರಿಗೆ ಎರಡು ವರ್ಷದವರೆಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ, ಈ ವರ್ಷ ಡಿಪ್ಲೋಮಾ ಕಂಪ್ಲೀಟ್‌ ಮಾಡಿ ನಿರುದ್ಯೋಗಿಗಳಾಗಿದ್ದವರಿಗೆ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ನೀಡೋದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ, ಈ ವರ್ಷ ಪದವಿ, ಡಿಪ್ಲೋಮಾ ಮುಗಿಸಿ ಕೆಲಸ ಸಿಗದವರಿಗೆ ಈ ಯೋಜನೆಯಿಂದ ಹಣ ಸಿಗಲಿದೆ.

ಮಹಿಳೆಯರಿಗೆ ಉಚಿತ ಪಾಸ್‌ –
ಕರ್ನಾಟಕದ ಮಹಿಳೆಯರಿಗೆ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಉಚಿತ ಎಂದು ಘೋಷಿಸಲಾಗಿದೆ. ಅಂದರೆ ಮಹಿಳೆಯರು ಕರ್ನಾಟಕದವರೇ ಆಗಿರಬೇಕು, ಬೇರೆ ರಾಜ್ಯದಿಂದ ಬಂದು ಇಲ್ಲಿ ಪ್ರಯಾಣ ಮಾಡೋದಕ್ಕೆ ಆಗೋದಿಲ್ಲ ಎಂಬ ನಿಯಮವನ್ನು ಜಾರಿ ಮಾಡಲಾಗಿದೆ.

ಈ ಐದೂ ಯೋಜನೆಗಳಿಗೆ ಮೊದಲ ಕ್ಯಾಬಿನೆಟ್‌ನಲ್ಲೇ ಒಪ್ಪಿಗೆ ಪಡೆದಿದ್ದೇವೆ. ಇದಕ್ಕೆ ಎಷ್ಟು ಖರ್ಚಾಗುತ್ತೆ ಎಂಬುದನ್ನು ಲೆಕ್ಕ ಹಾಕಿ ಮುಂದಿನ ವಾರ ನಡೆಯುವ ಕ್ಯಾಬಿನೆಟ್‌ ಸಭೆಯ ನಂತರ ಐದೂ ಯೋಜೆನಗಳನ್ನು ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಇಂದಿತಾ ಕ್ಯಾಂಟೀನ್‌ಗಳನ್ನು ಪುನಾರಂಬ ಮಾಡುತ್ತೇವೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.  ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ವಿಧಾಮಮಂಡಲ ಕಲಾಪ ನಡೆಸಲಿದ್ದೇವೆ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಿದ್ದು, ಶಾಸಕರಿಗೆ ಪ್ರಮಾಣವಚನ ಬೋಧಿಸಲಾಗುತ್ತದೆ. ಅನಂತರ ಹೊಸ ಸ್ಪೀಕರ್‌ನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಿದ್ದರಾಮ್ಯ ಹೇಳಿದ್ದಾರೆ.

ನೂತನ ಸಿಎಂ ಸಿದ್ದರಾಮಯ್ಯ ಹೇಳಿದ ;ಪ್ರಮುಖ ವಿಚಾರಗಳು; 

ಐದು ಗ್ಯಾರೆಂಟಿಗಳನ್ನು ನಾವು ಜನರಿಗೆ ವಾಗ್ದಾನದ ರೂಪದಲ್ಲಿ ನೀಡಿದ್ದೆವು
ನಾವು ಜನತೆಗೆ ಹೇಳುವಾಗ ಮೊದಲ ಸಂಪುಟದ ಸಭೆಯಲ್ಲೇ ಈಡೇರಿಸುತ್ತೇವೆ ಎಂದಿದ್ದೆವು
ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. 2013ರ ಸರ್ಕಾರದಲ್ಲಿ 165 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ
ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ, ನಂಬಿಕೆ ಇದೆ. ವಿರೋಧ ಪಕ್ಷದವರು ಜನರನ್ನು ತಪ್ಪು ದಾರಿಗೆ ಎಳೆಯೋದಕ್ಕೆ ಪ್ರಯತ್ನಿಸುತ್ತಿದ್ದಾರೆ
ಈ ದೇಶದ ಪ್ರಧಾನಮಂತ್ರಿಗಳೇ ಮನ್‌ ಕಿ ಬಾತ್‌ನಲ್ಲಿ ಉಚಿತ ಗ್ಯಾರೆಂಟಿಗಳನ್ನು ನೀಡದರೆ ಜನರನ್ನು ಸಾಲಗಾರರನ್ನಾಗಿ ಮಾಡಿದಂತಾಗುತ್ತೆ ಎಂದು ಹೇಳಿದ್ದಾರೆ

ಆದ್ರೆ ನಾವು ಹೆಚ್ಚು ಸಾಲ ಮಾಡದೆ ಎಲ್ಲಾ ಭರವಸೆಗಳನ್ನು ಈಡೇರಿಸಿ ತೋರಿಸುತ್ತೇವೆ

ಈ ಎಲ್ಲಾ ಭರವಸೆಗಳನ್ನು ಈಡೇರಿಸಬೇಕಾದರೆ ತಕ್ಷಣದ ಲೆಕ್ಕಾಚಾರದಂತೆ 50 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು
ನಮ್ಮ ರಾಜ್ಯದ ಬಜೆಟ್‌ 3.10 ಲಕ್ಷ ಕೋಟಿ ರೂಪಾಯಿ ಇದೆ. ಪ್ರತಿ ವರ್ಷ ಹತ್ತು ಪರ್ಸೆಂಟ್‌ಗಿಂತ ಹೆಚ್ಚು ಗಾತ್ರ ಹೆಚ್ಚುತ್ತದೆ
ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುವುದರಿಂದ ಆದಾಯ ಇನ್ನೂ ಸ್ವಲ್ಪ ಹೆಚ್ಚಿಸಿಕೊಳ್ಳಬಹುದು
ಕೆಲವು ಇಲಾಖೆಗಳಲ್ಲಿ ನಮ್ಮ ಟಾರ್ಗೆಟ್‌ ಮಾಡಿಕೊಳ್ಳಲು ಸಾಧ್ಯವಾಗುತ್ತದೆ
ನಮಗುಳಿದಿರುವ ಪೆಟ್ರೋಲ್‌, ಡೀಸೆಲ್‌, ಅಬಕಾರಿ, ಟ್ರಾನ್ಸ್‌ಪೋರ್ಟ್‌, ಸ್ಟಾಂಪ್ಸ್‌ ಅಂಡ್‌ ರಿಜಿಸ್ಟ್ರೇಷನ್‌ ಇವು ರಾಜ್ಯಕ್ಕೆ ಬರುವ ತೆರಿಗೆಗಳು
೧೫ ಫೈನಾನ್ಸ್‌ ಕಮೀಷನ್ಸ್‌ ಮೂಲಕ ೫೦ ಸಾವಿರ ಕೋಟಿ ಬರುತ್ತದೆ. ಈ ವರ್ಷ. ಅದು ಒಂದು ಲಕ್ಷ ಕೋಟಿ ಆಗಬೇಕಿತ್ತು
೩೭ ಸಾವಿರ ಕೋಟಿ ತೆರಿಗೆ ಪಾಲು, ೧೩ ಸಾವಿರ ಕೋಟಿ ಕೇಂದ್ರ ಸಹಾಯ ಧನ ಬರಬಹುದು
೧೫ನೇ ಫೈನಾನ್ಸ್‌ ಕಮೀಷನ್‌ನಲ್ಲಿ ಅನ್ಯಾಯವಾಗದೇ ಇದ್ದರೆ ಒಂದು ಲಕ್ಷ ಕೋಟಿ ರೂಪಾಯಿ ಬರಬೇಕಿತ್ತು
ಇಲ್ಲಿದ್ದ ಬೇಜಾವಾಬ್ದಾರಿ ಸರ್ಕಾರ ೧೫ ಫೈನಾನ್ಸ್‌ ಕಮೀಷನ್‌ ಮುಂದೆ ಸಮರ್ಥ ವಾದ ಮಂಡಿಸಿಲ್ಲ
ನಾವು ಕಟ್ಟು ತೆರಿಗೆ ನಮ್ಮ ಪಾಲು. ಸುಮಾರು ೪ ಲಕ್ಷ ಕೋಟಿ ರೂಪಾಯಿ ಕರ್ನಾಟಕದಿಂದ ಕಟ್ಟುತ್ತೇವೆ
ಜಿಎಸ್‌ಟಿ, ಆಯಿಲ್‌ ಮೇಲೆ ತೆರಿಗೆ, ಸರ್‌ ಚಾರ್ಜ್‌ ಮುಂತಾದುವು. ಸರ್‌ ಚಾರ್ಜ್‌ ನಲ್ಲಿ ನಮಗೆ ಪಾಲು ಬರೋದಿಲ್ಲ
ವಿಶೇಷ ಸಹಾಯಧನ ಕೊಡಬೇಕು ಎಂದು ೧೫ನೇ ಫೈನಾನ್ಸ್‌ ಕಮೀಷನ್‌ ರೆಕಮೆಂಡ್‌ ಮಾಡಿತ್ತು. ೫೪೯೫ ಕೋಟಿ ರೂಪಾಯಿ
ಅದನ್ನು ನಮ್ಮ ರಾಜ್ಯ ಸರ್ಕಾರ ತೆಗೆದುಕೊಳ್ಳಲೇ ಇಲ್ಲ
ಇದಕ್ಕಿಂತ ರಾಜ್ಯಕ್ಕೆ ಅನ್ಯಾಯ ಮಾಡಿರುವ ಸರ್ಕಾರ ಯಾವುದಾದರೂ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನೆ
ಬೊಮ್ಮಾಯಿ ಜಿಎಸ್‌ಟಿ ಕೌನ್ಸಿಲ್‌ ಮೆಂಬರ್‌ ಆಗಿದ್ದರು
ನಾವು ಕೊಡೋದು ನಾಲ್ಕು ಲಕ್ಷ ಕೋಟಿ ರೂಪಾಯಿ, ನಮಗೆ ಬರೋದು ಐವತ್ತು ಸಾವಿರ ಕೋಟಿ ರೂಪಾಯಿ
ಯಾರು ಸಾಲಗಾರರನ್ನಾಗಿ ಮಾಡಿರೋದು ಯಾರು..? ಸಾಲಗಾರ ದೇಶ ಮಾಡಿರೋದು ಐಆರು..?
ಮನಮೋಹನ್‌  ಸಿಂಗ್‌ ಅಧಿಕಾರ ಬಿಟ್ಟಾಗ ದೇಶದ ಒಟ್ಟು ಸಾಲ ೫೩ ಲಕ್ಷ ೧೧ ಸಾವಿರ ಕೋಟಿ ರೂಪಾಯಿ ಸಾಲ ಇತ್ತು
ಈಗ ಇರೋ ದೇಶದ ಒಟ್ಟು ಸಾಲ ೧೫೫ ಲಕ್ಷ ಕೋಟಿ ರೂಪಾಯಿ ಸಾಲ ಇದೆ
ಸ್ವಾತಂತ್ರ್ಯ ಬಂದಾಗಿನಿಂದ ೫೩ ಲಕ್ಷದ ೧೧ ಸಾವಿರ ಕೋಟಿ ಸಾಲ ಮಾಡಿದ್ದರೆ, ೯ ವರ್ಷದಲ್ಲಿ ಮೋದಿ ಮಾಡಿದ ಸಾಲ ೧೦೨ ಲಕ್ಷ ಕೋಟಿ ರೂಪಾಯಿ

ರಾಜ್ಯದಲ್ಲಿ ನಾನು ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ ೨ ಲಕ್ಷ ೪೨ ಸಾವಿರ ಕೋಟಿ ರೂ ಇತ್ತು. ಅದೀಗ ೫ ಲಕ್ಷದ ೬೪ ಸಾವಿರ ಕೋಟಿ ರೂಪಾಯಿ ಆಗಿದೆ
ಕಳೆದದ ಐದು ವರ್ಷಗಳಲ್ಲಿ ೩ ಲಕ್ಷದ ೨೨ ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ.
ಈ ವರ್ಷದಲ್ಲೇ ೭೨ ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದಾರೆ.
ನನ್ನ ಆಡಳಿತದ ಅವಧಿಯಲ್ಲಿ ೧ ಲಕ್ಷದ ೧೬ ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ

ರಾಜ್ಯದಿಂದ ಅಸಲು, ಬಡ್ಡಿ ಈ ವರ್ಷ ಎಷ್ಟು ಕೊಟ್ಟಬೇಕು ಗೊತ್ತಾ ? – ೫೬ ಸಾವಿರ ಕೋಟಿ ರೂಪಾಯಿ ಕಟ್ಟಬೇಕು
ಜುಲೈನಲ್ಲಿ ನಮ್ಮ ಸರ್ಕಾರ ಬಜೆಟ್‌ ಮಂಡಿಸ್ತೀವಿ. ಆಗ ೩ ಲಕ್ಷ ೨೫ ಸಾವಿರ ಕೋಟಿ ರೂಪಾಯಿಗೆ ಬಜೆಟ್‌ ಗಾತ್ರ ಹೆಚ್ಚು ಮಾಡುತ್ತೇವೆ

೧೫ ಸಾವಿರ ಕೋಟಿ ತೆರಿಗೆ ಕಟ್ಟುನಿಟ್ಟಾಗಿ ವಸೂಲಿ ಮಾಡ್ತೀವಿ, ಸಾಲ ಕಡಿಮೆ ಮಾಡ್ತೀವಿ, ಇದರಿಂದ ಬಡ್ಡಿ ಕಡಿಮೆಯಾಗುತ್ತದೆ
ವರ್ಷಕ್ಕೆ ೫೦ ಸಾವಿರ ಕೋಟಿ ರೂಪಾಯಿ ಸಂಗ್ರಹಿಸೋದು ದೊಡ್ಡ ಕೆಲಸವಲ್ಲ

 

Share Post