BengaluruPolitics

15 ದಿನದಲ್ಲಿ 30 ಅಧಿಕಾರಿಗಳನ್ನು ವರ್ಗಾಯಿಸಿದ್ದಾರೆ; ಮುನಿರತ್ನ

ಬೆಂಗಳೂರು; ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳ ಅಂತರದಲ್ಲಿ 30 ಅಧಿಕಾರಿಗಳು ಸಸ್ಪೆಂಡ್‌ ಆಗಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಕೆಲಸ ಮಾಡೋದಕ್ಕೇ ಹೆದರುತ್ತಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಮಾತನಾಡಲು ಅವಕಾಶ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಡಿಕೆಶಿ ಜೊತೆ ಮಾತಾಡಲು ಅವಕಾಶ ಕೇಳಿದ್ದೇನೆ. ಅವರು ಅವಕಾಶ ಕೊಟ್ಟರೆ ನಾನು ಅವರೊಂದಿಗೆ ಮಾತನಾಡುತ್ತೇನೆ. ಒಂದು ವಿಕೆಟ್ ಮಿಸ್ ಆಗಿದೆ, ಅದನ್ನು ತೆಗೀಬೇಕು ಅಂತ ಅವ್ರು ಹೇಳಿದ್ದಾರೆ. ಅವರು ಕ್ರಿಕೆಟ್ ಪ್ಲೇಯರ್, ಅವರು ಹೊಡೀತಾರೆ. ನಾನೊಂದು ಮಿಸ್ ಆಗಿದ್ದೀನಿ, ಅವರು ಆಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಇನ್ನು ಗಣಿಗಾರಿಕೆ ಆರೋಪದ ಮೇಲೆ ಆಗಿರುವ ಎಫ್‌ಐಆರ್‌ ಬಗ್ಗೆಯೂ ಮುನಿರತ್ನ ಪ್ರತಿಕ್ರಿಯೆ ನೀಡಿದರು.

ನಾನು ಗಣಿಗಾರಿಕೆ ವೃತ್ತಿಯನ್ನು ಯಾವತ್ತೂ ಮಾಡಿಲ್ಲ. ಅದರ ಬಗ್ಗೆ ನನಗೆ ಗೊತ್ತೂ ಇಲ್ಲ. 25 ವರ್ಷಗಳ ಹಿಂದೆ ನಾನು ಖರೀದಿ ಮಾಡಿರುವ ಜಾಗದಲ್ಲಿ ಪಾಯ ತೆಗೆದಿದ್ದೇನೆ. ಈ ವೇಳೆ ಸಿಕ್ಕ ಕಲ್ಲುಗಳನ್ನು ತೆಗೆಯಲಾಗಿದೆ ಎಂದು ಹೇಳಿದರು.

Share Post