ತುಂಡುಡುಗೆ ತೊಟ್ಟು ಬೀದಿಗೆ ಬಂದ ಯುವತಿ!; ಮಹಿಳೆಯಿಂದ ಫುಲ್ ಕ್ಲಾಸ್!
ಬೆಂಗಳೂರು; ನಗರದಲ್ಲಿ ಯುವತಿಯರು ತುಂಡುಡುಗೆ ತೊಟ್ಟು ಬೀದಿಗಿಳಿಯೋದು ಕಾಮನ್.. ಎಲ್ಲಾ ಕಡೆಯಲ್ಲೂ ಇಂತಹ ದೃಶ್ಯಗಳು ಕಾಮನ್.. ಆದ್ರೆ ಹೀಗೆ ತೊಡೆ ಕಾಣಿಸೋ ರೀತಿಯಲ್ಲಿ ತುಂಡುಡುಗೆ ತೊಟ್ಟು ರಸ್ತೆಯಲ್ಲಿ ತಿರುಗಾಡುತ್ತಿದ್ದ ಯುವತಿಯೊಬ್ಬಳನ್ನು ನಿಲ್ಲಿಸಿದ ಮಹಿಳೆಯೊಬ್ಬರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.. ಮಹಿಳೆಯರು ಯಾವ ರೀತಿಯ ಬಟ್ಟೆ ಹಾಕಬೇಕು ಅನ್ನೋದರ ಪಾಠ ಹೇಳಿಕೊಟ್ಟಿದ್ದಾಳೆ.. ಹಂಗೆಲ್ಲಾ ಬಿಚ್ಕೊಂಡು ಓಡಾಡೋದು ಸರಿ ಅನಿಸೋದಿಲ್ಲ ಎಂದು ಸಖತ್ತಾಗೇ ಕ್ಲಾಸ್ ತಗೊಂಡಿದ್ದಾಳೆ.. ಏನು ನಿನ್ನ ಅವತಾರ ಎಂದು ಪ್ರಶ್ನೆ ಮಾಡಿದ್ದಾಳೆ..
ಬೆಂಗಳೂರಿನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಟ್ಯಾನಿ ಭಟ್ಟಾಚಾರ್ಜಿ ಎಂಬುವವರು ಇದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.. ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ಸ್ ಧರಿಸಲು ಅವಕಾಶವಿಲ್ವಾ? ಎಂದು ಕೆಲವರು ಕೇಳಿದ್ದಾರೆ.. ಒಂದಷ್ಟು ಜನ ಕೂಡಾ ಏನು ತಪ್ಪಿದೆ ಅದ್ರಲ್ಲಿ ಎಂದು ಪ್ರಶ್ನಿಸಿದ್ದಾರೆ..