HealthLifestyle

ನಿಮ್ಮಲ್ಲಿ ಈ ಲಕ್ಷಣ ಕಂಡುಬಂದರೆ ಅದು ಕಿಡ್ನಿ ಸಮಸ್ಯೆ ಇರಬಹುದು!

ಬೆಂಗಳೂರು; ಯಾವುದೇ ರೋಗ ಬಂದರೆ ಅರಗಿಸಿಕೊಳ್ಳಬಹುದೇನೋ, ಆದ್ರೆ ಕಿಡ್ನಿ ವೈಫಲ್ಯ, ಕ್ಯಾನ್ಸರ್‌ನಂತಹ ರೋಗಗಳು ಇಡೀ ಜೀವನವನ್ನೇ ಬರ್ಬಾದ್‌ ಮಾಡಿಬಿಡುತ್ತವೆ.. ಕ್ಯಾನ್ಸರ್‌ ಹೇಗೆ ಬರುತ್ತದೆ ಎಂದು ಯಾರಿಗೂ ಗೊತ್ತಾಗೋದಿಲ್ಲ.. ಆದ್ರೆ ಕಿಡ್ನಿ ಸಮಸ್ಯೆ ನಮ್ಮ ನೆಗ್ಲೆಕ್ಟ್‌ನಿಂದಲೇ ಬರೋದು.. ಹೀಗಾಗಿ, ನಮಗೆ ಕಿಡ್ನಿ ಸಮಸ್ಯೆ ಶುರುವಾದಾಗ ದೇಹದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ.. ಆರೋಗ್ಯದಲ್ಲಿ ಕೆಲ ವ್ಯತ್ಯಾಸಗಳು ಶುರುವಾಗುತ್ತವೆ.. ನಿಮಗೆ ಹಾಗೆ ಆಗುತ್ತಿದ್ದರೆ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುವುದು ಒಳ್ಳೆಯದು..

ಇದನ್ನೂ ಓದಿ; ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!

ಕಿಡ್ನಿಗಳು ನಮ್ಮ ದೇಹದಲ್ಲಿನ ರಕ್ತ ಶುದ್ಧೀಕರಣ ಮಾಡುತ್ತವೆ.. ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ.. ಹೀಗಾಗಿ ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ರಕ್ತ ಶುದ್ಧೀಕರಣ ನಡೆಯೋದಿಲ್ಲ.. ಇದರಿಂದಾಗಿ ನಾನು ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತೇವೆ.. ಒಂದು ವೇಳೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರೆ ನಮ್ಮ ದೇಹದಲ್ಲಿ ಒಂದಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.. ಅಂತಹ ಲಕ್ಷಣಗಳು ಕಾಣಿಸಿಕೊಂಡಾಗ ಎಚ್ಚೆತ್ತುಕೊಂಡರೆ ಕಿಡ್ನಿ ವೈಫಲ್ಯ ಖಂಡಿತವಾಗಿಯೂ ತಡೆಯಬಹುದು..

ಇದನ್ನೂ ಓದಿ; ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!

ಮೂತ್ರಪಿಂಡಗಳ ಸಮಸ್ಯೆ ಎದುರಾದರೆ ಮೊದಲು ಕಾಲುಗಳಲ್ಲಿ ಸಮಸ್ಯೆ ಶುರುವಾಗುತ್ತದೆ.. ಪಾದದ ಊತ ಶುರುವಾಗುತ್ತದೆ.. ಕಾಲು ನೋವು ಹೆಚ್ಚಾಗುತ್ತದೆ.. ಈ ರೀತಿಯ ಲಕ್ಷಣಗಳು ನಿಮಗೂ ಆದ್ರೆ ಖಂಡಿತವಾಗಿಯೂ ನಿರ್ಲಕ್ಷ್ಯ ಮಾಡಬೇಡಿ.. ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ.. ಕಿಡ್ನಿಯಲ್ಲಿ ಏನಾದರೂ ತೊಂದರೆಯಾದರೆ ನಡೆಯಲು ಕಷ್ಟವಾಗುತ್ತದೆ. ಪಾದಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ, ನೆಲದ ಮೇಲೆ ನಿಲ್ಲಲು ಕಷ್ಟವಾಗುತ್ತದೆ. ಕಾಲು ನೋವು ಅಸಹನೀಯವಾಗುತ್ತದೆ.. ಅಡಿಭಾಗದಲ್ಲಿರುವ ನೋವು ಕೂಡ ಮೂತ್ರಪಿಂಡದ ಸಮಸ್ಯೆಯ ಲಕ್ಷಣವಾಗಿದೆ. ಸಾಕಷ್ಟು ನಡೆದ ನಂತರ ಅಥವಾ ಎದ್ದ ನಂತರ ನೆಲದ ಮೇಲೆ ಹೆಜ್ಜೆ ಹಾಕಲು ಕಷ್ಟವಾಗುತ್ತದೆ..

ಇದನ್ನೂ ಓದಿ; ಹೆದ್ದಾರಿಗಳಲ್ಲಿ ಇನ್ಮುಂದೆ ಟೋಲ್‌ ಪ್ಲಾಜಾಗಳೇ ಇರೋದಿಲ್ಲ; ಹಾಗಂತ….!

ಕಾಲುಗಳ ಊತ, ಸೊಂಟದ ಕೀಲುಗಳಲ್ಲಿ ನೋವು, ಹೊಟ್ಟೆಯ ಕೆಳಭಾಗದಲ್ಲಿ ನೋವು, ಅಜೀರ್ಣ, ಮೂತ್ರ ವಿಸರ್ಜಿಸಲು ತೊಂದರೆಯಾಗುತ್ತದೆ.. ಮೂತ್ರದಲ್ಲಿ ರಕ್ತ ಬಂದರೂ ಕೂಡಾ ಅದಕ್ಕೆ ಮೂತ್ರಪಿಂಡದ್ದೇ ಸಮಸ್ಯೆ.. ಇವುಗಳು ಸಂಭವಿಸಿದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.. ಮೂತ್ರಪಿಂಡದ ಸಮಸ್ಯೆಗಳನ್ನು ತಡೆಗಟ್ಟಲು ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಜಂಕ್ ಫುಡ್ ಮತ್ತು ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಬದಲಾಗಿ, ಹೆಚ್ಚು ನೀರು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಅಲ್ಲದೆ, ನಿಯಮಿತವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು..

Share Post