ದೇಶದ ಅತಿ ಉದ್ದದ ಸಮುದ್ರದ ಮೇಲಿನ ಸೇತುವೆಗೆ ಪ್ರಧಾನಿ ಮೋದಿ ಚಾಲನೆ
ಮುಂಬೈ; ಸಮುದ್ರದ ಮೇಲೆ ನಿರ್ಮಾಣ ಮಾಡಿರುವ ಭಾರತದ ಅತಿ ಉದ್ದದ ಅಟಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈನ ಸೆವ್ರಿ- ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ ಕಲ್ಪಿಸಲು ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸಮುದ್ರದ ಮೇಲೆ ನಿರ್ಮಿಸಲಾಗಿರುವ ಈ ಸೇತುವೆ ದೃಶ್ಯಗಳು ಅತ್ಯಂತ ರಮಣೀಯವಾಗಿವೆ.
ಈ ಸೇರುವೆ ಸುಮಾರು 21 ಕಿಲೋ ಮೀಟರ್ ಉದ್ದವಿದೆ. ಇದನ್ನು ಸುಮಾರು 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಿನವೂ ಸುಮಾರು 70 ಸಾವಿರ ವಾಹನಗಳು ಇದರ ಮೇಲೆ ಸಂಚರಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಬೈಕ್, ಆಟೋ, ಟ್ರ್ಯಾಕ್ಟರ್, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಈ ಸೇತುವೆ ಮೇಲೆ ಸಂಚಾರ ಮಾಡಲು ಟೋಲ್ ನೀಡಬೇಕಾಗುತ್ತದೆ. ಏಕಮುಖ ಸಂಚಾರಕ್ಕೆ 250 ರೂಪಾಯಿ ಹಾಗೂ ದ್ವಿಮುಖ ಸಂಚಾರಕ್ಕೆ 375 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ವರಣಾರ್ಥವಾಗಿ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ಅಟಲ್ ಸೇತುವೆ ಎಂದು ಹೆಸರಿಡಲಾಗಿದೆ.