CrimeNational

ಮಲೇಷಿಯಾದಿಂದ ಬಂದಿದ್ದ ಕಂಟೈನರ್‌ ಶಿಪ್‌ನಲ್ಲಿ ಭಾರೀ ಬೆಂಕಿ ಅವಘಡ!

ಕಾರವಾರ; ಮಲೇಷಿಯಾದಿಂದ ಬಂದಿದ್ದ ಕಂಟೈನರ್‌ ಶಿಪ್‌ನಲ್ಲಿ ಭಾರೀ ಬೆಂಕಿ ಅನಾಹುತವಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.. ಕಾರವಾರ ಬಂದರಿನಿಂದ 50 ನಾಟಿಕಲ್‌ ಮೈಲು ದೂರದಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ನಂದಿಸಲು ಹರಸಾಹಸಪಡಲಾಗಿದೆ.. ಬೋಟ್‌ನಲ್ಲಿದ್ದವರನ್ನು ಸೇಫಾಗಿ ರಕ್ಷಣೆ ಮಾಡಲಾಗಿದೆ..

ಇದನ್ನೂ ಓದಿ; ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಏರಿಕೆ; ಮುಸ್ಲಿಮರ ಸಂಖ್ಯೆ ಅಲ್ಪ ಇಳಿಕೆ!

ಈ ಶಿಪ್‌ ಮಲೇಷಿಯಾದಿಂದ ಜುಲೈ 2ರಂದು ಹೊರಟಿತ್ತು.. ಮೊದಲಿಗೆ ಗೋವಾಗೆ ಬಂದಿದ್ದ ಶಿಪ್‌ ನಂತರ ಅದು ಶ್ರೀಲಂಕಾದತ್ತ ಹೊರಟಿತ್ತು.. ಈ ವೇಳೆ ಕಾರವಾರದ ಹತ್ತಿರ ಬಂದಾಗ ಬೆಂಕಿ ಕಾಣಿಸಿಕೊಂಡಿದೆ.. ಶಿಪ್‌ನಲ್ಲಿದ್ದ ವಸ್ತುಗಳಿಗೆ ಭಾರೀ ಬೆಂಕಿ ತಗುಲಿದೆ.. ಈ ಶಿಪ್‌ನಲ್ಲಿ ಒಟ್ಟು 21 ಮಂದಿ ಇದ್ದರು.. ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ; ವರನ ಅಪ್ಪನಿಗೂ ವಧುವಿನ ತಾಯಿಗೂ ಪ್ರೇಮಾಂಕುರ!; ಮುಂದೇನಾಯ್ತು..?

ಕೋಸ್ಟ್‌ಗಾರ್ಡ್‌ನ ಏರ್‌ಕ್ರಾಫ್ಟ್‌, ಹೆಲಿಕಾಪ್ಟರ್‌ ಹಾಗೂ ಮೂರು ಬೋಟ್‌ಗಳನ್ನು ಬಳಸಿ ಮೊದಲಿಗೆ ಶಿಪ್‌ನಲ್ಲಿದ್ದ 21 ಮಂದಿಯನ್ನು ರಕ್ಷಣೆ ಮಾಡಲಾಯಿತು.. ಅನಂತರ ಶಿಪ್‌ಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಲಾಯಿತು.. ಶಿಪ್‌ನಲ್ಲಿದ್ದವರಿಗೆ ಯಾವುದೇ ಗಾಯ ಅಥವಾ ಹಾನಿಯಾಗಿಲ್ಲ.. ಎಲ್ಲರೂ ಸೇಫಾಗಿದ್ದಾರೆ ಎಂದು ತಿಳಿದುಬಂದಿದೆ..
ಎಲ್ಲವೂ ಸರಿಯಾಗಿ ಆಗಿದ್ದರೆ ನಾಳೆ ಈ ಶಿಪ್‌ ಶ್ರೀಲಂಕಾ ತಲುಪಬೇಕಿತ್ತು.. ಆದ್ರೆ ಮಾರ್ಗಮಧ್ಯೆಯೇ ಬೆಂಕಿಗೆ ಆಹುತಿಯಾಗಿದೆ..

Share Post