ಅಫ್ಗಾನ್ ದೇಶದಲ್ಲಿ ಮಕ್ಕಳ ಅಂಗಾಂಗ ಮಾರಟ
ಕಾಬೂಲ್ : ಅಫ್ಘಾನ್ ದೇಶದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿ ಪರಿಣಮಿಸುತ್ತಿದೆ. ತಮ್ಮ ಜೀವನ ಸಾಗಿಸಲು ಮಕ್ಕಳ ಅಂಗಾಂಗ ಮಾರಾಟಕ್ಕೆ ಇಳಿದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕೆಲವು ತಿಂಗಳ ಹಿಂದೆ ತಾಲಿಬಾನಿಗಳು ಆಡಳಿತವನ್ನು ವಹಿಸಿಕೊಂಡಿದ್ದರು. ತಾಲಿಬಾನಿಗಳು ಆಡಳಿತಕ್ಕೆ ಬಂದ ನಂತರ ಅಲ್ಲಿನ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಮಕ್ಕಳ ಅಂಗಾಂಗ ಮಾರಾಟ ನಡೆದಿದೆ.
ವಲಸಿಗರನ್ನು ಟಾರ್ಗೆಟ್ ಮಾಡಿ ಮಕ್ಕಳನ್ನು ಮತ್ತು ಅಂಗಾಂಗ ಮಾರಲು ಪ್ರಚೋದನೆ ನೀಡಲಾಗ್ತಿದೆ. ಒಂದು ಮಗುವಿಗೆ 1ಲಕ್ಷ, ಒಂದು ಕಿಡ್ನಿಗೆ 1,50,000 ದಿಂದ 2,20,000 ಸಾವಿರದ ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮವೊಂದು ಸುದ್ದಿ ಮಾಡಿತ್ತು.
ಕೊರೊನಾ ಮತ್ತು ದೇಶದ ಆರ್ಥಿಕ ಸ್ಥಿತಿಯಿಂದ ದೇಶದ ಜನ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ಕುಟುಂಬದಲ್ಲಿ ಕನಿಷ್ಠ ಎರಡರಿಂದ ೭ ಮಕ್ಕಳು ಇರುತ್ತಾರೆ ಎಂದು ಕೂಡ ಹೇಳಿದ್ದಾರೆ.
ಈ ಕೃತ್ಯಗಳನ್ನು ತಡೆಗಟ್ಟಲು ದತ್ತಿ ಸಮಿತಿಯು ಸಹಾಯ ಮಾಡುತ್ತಿದೆ ಎಂದು ಹೇಳಲಾಗ್ತಿದೆ.