International

ಟ್ವಿಟರ್‌ ಖರೀದಿ ಮಾಡೋದಿಲ್ವಂತೆ ಎಲಾನ್‌ ಮಸ್ಕ್‌; ಕಾರಣ ಏನು ಗೊತ್ತಾ..?

ಸ್ಯಾನ್‌ ಫ್ರಾನ್ಸಿಸ್ಕೊ; ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು 44 ಶತಕೋಟಿ ಡಾಲರ್‌ಗೆ ಖರೀದಿಸುವುದಕ್ಕೆ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಒಪ್ಪಂದ ಮಾಡಿಕೊಂಡಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಅವರು ಈಗ ಆ ನಿರ್ಧಾರದಿಂದ ಹೊರಬಂದಿದ್ದಾರೆ. ಒಪ್ಪಂದವನ್ನು ಕೈಬಿಡುತ್ತಿರುವುದಾಗಿ ಅವರು ಹೇಳಿದ್ದಾರೆ.

ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್‌ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಟ್ವಿಟರ್‌ನ ಪ್ರತಿ ಷೇರನ್ನು 54.20 ಡಾಲರ್‌ಗಳಿಗೆ ಖರೀದಿಸುವುದಾಗಿ ಮಸ್ಕ್ ಏಪ್ರಿಲ್‌ನಲ್ಲಿ ತಿಳಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳನ್ನು ವೀಕ್ಷಿಸುತ್ತಿರುವ ಬಳಕೆದಾರರ ಪೈಕಿ ನಕಲಿ ಮತ್ತು ಬೋಟ್ ಖಾತೆಗಳು ಶೇಕಡಾ 5ಕ್ಕಿಂತ ಕಡಿಮೆ ಇವೆ ಎಂಬುದನ್ನು ಟ್ವಿಟರ್‌ ಪುರಾವೆ ಸಹಿತ ತೋರಿಸದೇ ಇದ್ದರೆ ಒಪ್ಪಂದವನ್ನು ಮುರಿಯುವುದಾಗಿ ಮಸ್ಕ್‌ ಈ ಹಿಂದೆ ಎಚ್ಚರಿಸಿದ್ದರು.

Share Post