InternationalLifestyle

ಈಕೆ ದಿನವೂ ಕೆಲಸಕ್ಕೆ ವಿಮಾನದಲ್ಲಿ ಹೋಗ್ತಾಳೆ..!; ಇಲ್ಲಿ ಮನೆ ಬಾಡಿಗೆಗಿಂತ ವಿಮಾನ ದರ ಕಡಿಮೆ!

ನ್ಯೂಜೆರ್ಸಿ; ಕಚೇರಿಗೆ ಹೋಗುವವರು ತಾವು ಕೆಲಸ ಮಾಡುತ್ತಿರುವ ಕಂಪನಿಯ ಬಳಿ ಮನೆ ಮಾಡುತ್ತಾರೆ. ಇಲ್ಲವೆ ಯಾವುದಾದರೂ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಾರೆ. ಬಾಡಿಗೆ ಕಟ್ಟಲಾಗದವರು ಪ್ರತಿ ದಿನ ಸ್ವಂತ ಊರಿನಿಂದಲೇ ರೈಲು, ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಆದ್ರೆ ಇಲ್ಲೊಬ್ಬ ಯುವತಿ ಪ್ರತಿದಿನ ವಿಮಾನದಲ್ಲಿ ಕಚೇರಿಗೆ ಹೋಗುತ್ತಿದ್ದಾಳೆ. 21ರ ಹರೆಯದ ಸೋಫಿಯಾ ನ್ಯೂಜೆರ್ಸಿಯ ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಳೆ. ಸೋಫಿಯಾ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಭಾರತೀಯ ಸಮಯದ ಪ್ರಕಾರ, ಸೋಫಿಯಾ ಬೆಳಿಗ್ಗೆ 3.30 ಕ್ಕೆ ಎದ್ದು ರೆಡಿಯಾಗಿ ವಿಮಾನ ನಿಲ್ದಾಣಕ್ಕೆ ಹೊರಡುತ್ತಾಳೆ.

ನ್ಯೂಜೆರ್ಸಿಗೆ ವಿಮಾನ ಟಿಕೆಟ್‌ ಪಡೆದು ಪ್ರಯಾಣಿಸುತ್ತಾಳೆ. ಕೆಲಸ ಮುಗಿದ ನಂತರ ಮತ್ತೆ ಆಕೆ ನ್ಯೂಜೆರ್ಸಿಯ ವಿಮಾನ ನಿಲ್ದಾಣಕ್ಕೆ ಹೋಗುತ್ತಾಳೆ ಮತ್ತು ನ್ಯೂಯಾರ್ಕ್‌ಗೆ ವಿಮಾನವನ್ನು ಕಾಯ್ದಿರಿಸುತ್ತಾಳೆ. ಇದು ಕೇಳಲು ವಿಚಿತ್ರ ಅಲ್ಲವೇ? ಸೋಫಿಯಾ ಪ್ರತಿದಿನ ವಿಮಾನದಲ್ಲಿ ಯಾಕೆ  ಪ್ರಯಾಣಿಸುತ್ತಿದ್ದಾಳೆ ಗೊತ್ತಾ? ನ್ಯೂಜೆರ್ಸಿಯಲ್ಲಿ ಮನೆಯನ್ನು ಬಾಡಿಗೆ ತುಂಬಾನೇ ದುಬಾರಿ. ವಿಮಾನ ಪ್ರಯಾಣಕ್ಕಿಂತಲೂ ದುಪ್ಪಟ್ಟಾಗುತ್ತೆ. ಹೀಗಾಗಿ, ಕೊಂಚ ಕಷ್ಟ ಎನಿಸಿದರೂ ಸೋಫಿಯಾ ವಿಮಾನದಲ್ಲಿ ಅಪ್‌ ಅಂಡ್‌ ಡೌನ್‌ ಮಾಡಿ ಹಣ ಉಳಿಸುತ್ತಿದ್ದಾಳೆ.

 

Share Post