ರಾಜ್ಯದಲ್ಲಿ ಇಂದು 34,074ಕೇಸ್ ದಾಖಲು: 13ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು 34,047 ಕೊರೊನಾ ಕೇಸ್ಗಳು ದಾಖಲಾಗಿದೆ. ಒಟ್ಟು ಹದಿಮೂರು ಮಂದಿ ಸಾವನ್ನಪ್ಪಿದ್ದು, ಕೊರೊನಾ ಪಾಸಿಟಿವಿಟಿ ರೇಟ್ 19.29ಕ್ಕೆ ಏರಿಕೆಯಾಗಿದೆ.
ಇಂದು ಆಸ್ಪತ್ರೆಯಿಂದ 5,902 ಮಂದಿ ಬಿಡುಗಡೆ ಹೊಂದಿದ್ದು, ಇದುವೆರೆಗೆ 29,83,645 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 3,978 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದಿನ 16/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/SKqc7TMkEx @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/29flnBHyQB
— K'taka Health Dept (@DHFWKA) January 16, 2022
ಇತರೆ ಜಿಲ್ಲೆಗಳಲ್ಲಿ ಮೈಸೂರು- 1892, ತುಮಕೂರು -1373, ಹಾಸನ- 1171, ಬೆಂಗಳೂರು ಗ್ರಾಮಾಂತರ- 722, ದಕ್ಷಿಣ ಕನ್ನಡ -782, ಮಂಡ್ಯ- 709, ಧಾರವಾಡ -634, ಉಡುಪಿ- 591, ಕಲಬುರಗಿ -562, ಬಳ್ಳಾರಿ -566, ಕೋಲಾರ -552, ಬೆಳಗಾವಿ- 468 ಹಾಗೂ ಉತ್ತರ ಕನ್ನಡದಲ್ಲಿ 447 ಸೋಂಕು ಪ್ರಕರಣಗಳು ದಾಖಲಾಗಿವೆ.