Health

India Covid Update : 24ಗಂಟೆಗಳಲ್ಲಿ 1,94,720 ಹೊಸ ಪ್ರಕರಣಗಳು ಪತ್ತೆ

ನವದೆಹಲಿ : ದೇಶದಾದ್ಯಂತ ಮೂರನೇ ಆಲೆ ಸಮುದಾಯಕ್ಕೆ ಹಬ್ಬಿದೆ. ಎಷ್ಟೇ ನೈಟ್‌ ಕರ್ಫ್ಯೂ , ವೀಕೆಂಡ್‌ ಕರ್ಫ್ಯೂ ಹಾಕಿದರೂ ಕೇಸ್‌ ಮಾತ್ರ ಕಮ್ಮಿ ಆಗ್ತಿಲ್ಲ. ಕಳೆದ 24 ಗಂಟೆಯಲ್ಲಿ 1,94,720 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 442 ಮಂದಿ ಮೃತ ಪಟ್ಟಿದ್ದಾರೆ.

ಇನ್ನು ಪಾಸಿಟಿವಿಟಿ ರೇಟ್‌ ಶೇ 11.05ರಷ್ಟು ಆಗಿದೆ. ಒಟ್ಟು ಸಕ್ರಿಯ ಕೇಸ್‌ಗಳ ಸಂಖ್ಯೆ 9,55,319ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್‌ ಏರಿಕೆ ಗಮನಿಸಿ ನೆನ್ನೆ ತುರ್ತು ಸಭೆ ಕರೆಯಲಾಗಿತ್ತು. ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂವನ್ನು ಜನವರಿ ಕೊನೆಯವರೆಗೂ ವಿಸ್ತರಿಸಲಾಗಿದೆ. ಅಗತ್ಯ ಬಿದ್ದರೆ ಲಾಕ್‌ಡೌನ್‌ ಮೊರೆ ಹೋಗುವ ಸುಳಿವು ನೀಡಿದ್ದಾರೆ.

 

 

Share Post