ದೆಹಲಿ ಪೊಲೀಸರ ಬೆಂಬಿಡದ ಕೊರೊನಾ; 10 ದಿನದಲ್ಲಿ 1700 ಪೊಲೀಸರಿಗೆ ಸೋಂಕು..!
ನವದೆಹಲಿ: ಮುಂಬೈನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ಕಾಡುತ್ತಿದೆ. ಆದ್ರೆ ದೆಹಲಿಯಲ್ಲಿ ಪೊಲೀಸರಿಗೆ ಕೊರೊಬಾ ಹೆಚ್ಚು ಬಾಧಿಸುತ್ತಿದೆ. ಜನವರಿ 1 ರಿಂದ ಇಲ್ಲಿಯವರೆಗೆ ಒಟ್ಟು 1700 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ.
ದೆಹಲಿಯ ಪ್ರತಿ ಪೊಲೀಸ್ ಠಾಣೆಯಲ್ಲೂ ಒಂದಷ್ಟು ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕು ತಗುಲಿದೆ. ಹಲವು ಪೊಲೀಸರು ತೀವ್ರ ಜ್ವರ, ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆ ಸೇರಿದ್ದಾರೆ.
ದೆಹಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ಪೊಲೀಸರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಅನುಸರಿಸುತ್ತಿದ್ದಾರೆ. ಜೊತೆಗೆ ಎಲ್ಲರೂ ಎರಡೂ ಡೋಸ್ ಲಸಿಕೆ ಕೂಡಾ ಪಡೆದಿದ್ದಾರೆ. ಹೀಗಿದ್ದರೂ ಸೋಂಕು ಪೊಲೀಸರಿಗೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಿದೆ.