ವಿಮಾನ ಹಾರಾಡುತ್ತಿರುವಾಗಲೇ ಪೈಲಟ್ ಸಾವು!; ಮುಂದೇನಾಯ್ತು..?
ನ್ಯೂಯಾರ್ಕ್; ವಿಮಾನ ಹಾರಾಟ ಮಾಡುತ್ತಿರುವಾಗಲೇ ಪೈಲಟ್ ಒಬ್ಬರು ಸಾವನ್ನಪ್ಪಿದ್ದಾರೆ.. ಇದರಿಂದಾಗಿ ಆಕಾಶದಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.. ಆದ್ರೆ ಕೋ ಪೈಲಟ್ ವಿಮಾನವನ್ನು ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭುಸ್ಪರ್ಶ ಮಾಡಿದ್ದಾರೆ..
ಟರ್ಕಶ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ.. ಮಂಗಳವಾರ ರಾತ್ರಿ ಸಿಯಾಟಲ್‌ನಿಂದ 204 ಫ್ಲೈಟ್ ಟೇಕ್ ಆಫ್ ಆದ ಕೆಲ ಸಮಯದ ನಂತರ ಈ ಘಟನೆ ನಡೆದಿದೆ.. ಪೈಲಟ್ ಇಲ್ಸೆಹಿನ್ ಪೆಹ್ಲಿವಾನ್ ವಿಮಾನದಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದಿದ್ದಾರೆ.. ಹೀಗಾಗಿ ಕೂಡಲೇ ವಿಮಾನವನ್ನು ನ್ಯೂಯಾರ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.. ಆದ್ರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ..
ಮೃತ ಪೈಲಟ್ ಇಲ್ಸೆಹಿನ್ ಪೆಹ್ಲಿವಾನ್ 2007ರಿಂದಲೂ ಟರ್ಕಿಶ್ ಏರ್‌ಲೈನ್ಸ್‌ನಲ್ಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.. ಈ ಕಾರಣದಿಂದಾಗಿ ಪ್ರಯಾಣಿಕರಿಗೆ ಬೇರೆ ವಿಮಾನಗಳಲ್ಲಿ ತಮ್ಮ ಸ್ಥಳಗಳಿಗೆ ತಲುಪುವ ವ್ಯವಸ್ಥೆ ಮಾಡಲಾಯಿತು..