ಜನವರಿ ಅಂತ್ಯದವರೆಗೂ ವೀಕೆಂಡ್, ನೈಟ್ ಕರ್ಫ್ಯೂ ವಿಸ್ತರಣೆ
ಬೆಂಗಳೂರು : ದೇಶದಲ್ಲಿ ಕೋವಿಡ್ ಸಮುದಾಯಕ್ಕೆ ಹಬ್ಬಿದೆ. ಮೂರನೇ ಅಲೆ ಅಷ್ಟು ಗಂಭೀರ ಪರಿಣಾಮಗಳನ್ನು ಬೀರದಿದ್ದರೂ ಕೂಡ ಕೇಸ್‌ಗಳು ಮಾತ್ರ ಏರಿಕೆ ಆಗುತ್ತಲೇ ಇವೆ. ಇದರ ಬಗ್ಗೆ ಮಹತ್ವದ ಸಭೆಯಲ್ಲಿ ಮಾತನಾಡಿದ ಸಿಎಂ ಮತ್ತು ತಂಡ ಕಠಿಣ ರೂಲ್ಸ್‌ಗಳನ್ನ ಜನವರಿ ಅಂತ್ಯದವರೆಗೂ ವಿಸ್ತರಿಸಿದೆ.
ರಾಜ್ಯಾದ್ಯಂತ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, 50-50 ನಿಯಮಗಳನ್ನು ಜನವರಿ ಅಂತ್ಯದವರೆಗೂ ಮುಂದುವರೆಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಒಂದರಲ್ಲೇ ನಿತ್ಯ 1.5ಲಕ್ಷ ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಜನವರಿ 14ರಂದು ಪ್ರಧಾನಿ ಮೋದಿ ಜೊತೆ ಸಿಎಂ ಮತ್ತು ತಜ್ಞರು ಮೀಟಿಂಗ್ ನಡೆಸಲಿದ್ದಾರೆ. ಇದರ ನಂತರ ಮತ್ತಷ್ಟು ಟಫ್ ರೂಲ್ಸ್ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇನ್ನು ಮಕ್ಕಳಿಗೆ ಆದಷ್ಟು ತ್ವರಿತ ಗತಿಯಲ್ಲಿ ಲಸಿಕೆ ನೀಡಿ ಎಂದು ಸಿಎಂ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ಸಂದಣಿಯಾಗುವ ಮಾರುಕಟ್ಟೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡ್ತೀವಿ ಎಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪರಿಸ್ಥಿತಿ ಕೈ ಮೀರಿದರೆ ಲಾಕ್‌ಡೌನ್ ಅನಿವಾರ್ಯವಾಗುತ್ತೆ ಎಂದು ಗೃಹ ಮಂತ್ರಿ ಹೇಳಿದ್ದಾರೆ.