ಮೈಸೂರಿನಲ್ಲಿ ಹಿಜಾಬ್ ಕಿಚ್ಚು: ಡಿಸಿ ಕಚೇರಿಗೆ ಬಿಗಿ ಭದ್ರತೆ
ಮೈಸೂರು: (Mysore) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿಜಾಬ್ ಕಿಚ್ಚು ಹೊತ್ತಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಇಸ್ಲಾಂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಜಮಾವಣೆಯಾಗಿದ್ದಾರೆ. ಬುರ್ಖಾ ಧರಿಸಿದ ನೂರಾರು ವಿದಾರ್ಥಿನಿಯರ ಜಮಾವಣೆ ನಡೆದಿದೆ. ಪ್ರತಿಭಟನೆ ಮಾಡುವುದಾಗಿ ವದಂತಿ ಹಬ್ಬಿಸಿದ್ದರಿಂದ ನೂರಾರು ಜನ ವಿದ್ಯಾರ್ಥಿಗಳು ಡಿಸಿ ಕಚೇರಿ ಬಳಿಗೆ ಆಗಮಿಸಿದ್ದರು.
ಪ್ರತಿಭಟನೆ ಮಾಡುವುದಾಗಿ ತಿಳಸಿದ ಸುಳ್ಳು ಸಂದೇಶದಿಂದ ಇಂದು ಮೈಸೂರು ಜಿಲ್ಲಾಧಿಕಾರಿ(DC Office) ಕಚೇರಿಗೆ ನೂರಾರು ವಿದ್ಯಾರ್ಥಿಗಳು ಬುರ್ಖಾಧಾರಿಗಳಾಗಿ ಆಗಮಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಪ್ರತಿಭಟನೆ ಯಾವುದಕ್ಕೂ ಆಸ್ಪದ ನೀಡಿಲ್ಲ.. ಸುಳ್ಳು ಸಂದೇಶದಿಂದ ನೂರಾರು ಜನ ಆಗಮಿಸಿದ್ದರು ಎನ್ನಲಾಗಿದೆ. ಕೂಡಲೇ ಎಲ್ಲರೂ ವಾಪಸ್ ತೆರಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಲ್ಲರೂ ಮನೆಗೆ ತೆರಳುವಂತೆ ಖಾಕಿ ಸಂದೇಶ ನೀಡಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.