DistrictsPolitics

ಹಾಸನ ಅಶ್ಲೀಲ ವಿಡಿಯೋ ಮೊದಲು ಪಬ್ಲಿಕ್‌ ಆಗಿದ್ದು ಹೇಗೆ ಗೊತ್ತಾ..?

ಬೆಂಗಳೂರು; ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿದೆ.. ಒಂದು ಕಡೆ ಎಸ್‌ಐಟಿ ಅಧಿಕಾರಿಗಳು, ಸಂತ್ರಸ್ತರನ್ನು ಹುಡುಕಿ ಅವರಿಂದ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.. ಇನ್ನೊಂದೆಡೆ ಯಾರಿಂದ ಈ ವಿಡಿಯೋಗಳು ಲೀಕ್‌ ಆದವು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.. ಈ ಬೆನ್ನಲ್ಲೇ ಒಂದಷ್ಟು ಕುತೂಹಲದ ಅಂಶಗಳು ಬಯಲಿಗೆ ಬಂದಿವೆ..

ಮಾಡಿರುವುದು ದೊಡ್ಡ ತಪ್ಪು ಆದರೆ, ಆ ವಿಡಿಯೋಗಳನ್ನು ಬಿಡುಗಡೆ ಮಾಡಿ ಸಂತ್ರಸ್ತೆಯರ ಮಾನ ಹರಾಜಾಕಿರುವುದು ಕೂಡಾ ದೊಡ್ಡ ತಪ್ಪು.. ಈ ಹಿನ್ನೆಲೆಯಲ್ಲಿ ವಿಡಿಯೋ ಲೀಕ್‌ ಮಾಡಿದವರ ವಿರುದ್ಧ ಕೂಡಾ ಕ್ರಮ ಕೈಗೊಳ್ಳುವ ಅಗತ್ಯವಿದೆ.. ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ..

ಮೊದಲು ಈ ವಿಡಿಯೋಗಳು ಸಿಕ್ಕಿರುವುದು ಪ್ರಜ್ವಲ್‌ ಕಾರಿನ ಮಾಜಿ ಡ್ರೈವರ್‌ ಕಾರ್ತೀಕ್‌ ಕೈಗೆ ಸಿಕ್ಕಿರುವುದು.. ಅದನ್ನು ಕಾರ್ತೀಕ್‌ ಅವರೇ ಹೇಳಿಕೊಂಡಿದ್ದಾರೆ.. ಇದೇ ಕಾರ್ತೀಕ್‌ ವಾಟ್ಸ್‌ ಆಪ್‌ ಮೂಲಕ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಕಾರ್ತೀಕ್‌ ಅವರು ಪ್ರಜ್ವಲ್‌ ಅವರ ವಾಟ್ಸ್‌ ಆಪ್‌ಗೂ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.. ಈ ಬಗ್ಗೆ ವಕೀಲ ದೇವರಾಜೇಗೌಡ ಕೂಡಾ ಆರೋಪ ಮಾಡಿದ್ದರು..

ಹೀಗೆ ಕಾರ್ತೀಕ್‌ ಶೇರ್‌ ಮಾಡಿದ ವಿಡಿಯೋಗಳು ಫೇಸ್‌ಬುಕ್‌ನಲ್ಲೊ ಹರಿದಾಡಿವೆ ಎಂದು ಹೇಳಲಾಗುತ್ತಿದೆ.. ನವೀನ್‌ ಗೌಡ ಎಂಬುವವರ ಅಕೌಂಟ್‌ನಿಂದ ಫೇಸ್‌ಬುಕ್‌ ನಲ್ಲಿ ವಿಡಿಯೋ ಅಪ್ಲೋಡ್‌ ಆಗಿದೆ ಎಂದು ಹೇಳಲಾಗುತ್ತಿದೆ.. ಈ ಆಧಾರದಲ್ಲಿ ತನಿಖೆ ನಡೆಯುತ್ತಿದೆ..

ಕಾರು ಡ್ರೈವರ್‌ ಕಾರ್ತೀಕ್‌ ಹಾಗೂ ಪ್ರಜ್ವಲ್‌ ರೇವಣ್ಣ ನಡುವೆ ಸ್ನೇಹ ಕೂಡಾ ಇತ್ತು.. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಅವರ ಮೊಬೈಲ್‌ ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ ಕಾರ್ತೀಕ್‌, ಐ ಫೋನ್‌ ಖರೀದಿ ಮಾಡಿ ಐ ಡ್ರಾಪ್‌ ಮೂಲಕ ವಿಡಿಯೋಗಳನ್ನು ತನ್ನ ಮೊಬೈಲ್‌ ವರ್ಗಾವಣೆ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ತನಿಖೆ ಚುರುಕುಗೊಂಡಿದೆ..

 

Share Post