ದೆಹಲಿಯ 1000 ಪೊಲೀಸ್ ಸಿಬ್ಬಂದಿಗೆ ಕೋವಿಡ್
ನವದೆಹಲಿ : ಮೂರನೇ ಅಲೆಯ ವೇಗ ನೋಡುತ್ತಿದ್ದರೆ ನಡುಕ ಹುಟ್ಟಿಸುವಂತೆ ಇದೆ. ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯಲ್ಲಿ ಇಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೋಂಕು ತಗುಲಿರುವುದು ಸೋಮವಾರ ದೃಡವಾಗಿದೆ.
ಸದಾ ಸಾರ್ವಜನಿಕರ ಹಿತ ಕಾಪಾಡಲು ಶ್ರಮಿಸುವ ಪೊಲೀಸರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಹೆಚ್ಚುವರಿ ಆಯುಕ್ತ ಚಿನ್ಮೋಯ್ ಬಿಸ್ವಾಲ್ ಸೇರಿದಂತೆ ೧೦೦೦ ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಬಂದಿದ್ದು, ಎಲ್ಲಾ ಸೋಂಕಿತ ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ.
ಸಂಸತ್ತಿನ 400ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ಇರುವುದು ಭಾನುವಾರ ದೃಢಪಟ್ಟಿತ್ತು. ದೆಹಲಿಯಲ್ಲಿ ಭಾನುವಾರ ಒಂದೇ ದಿನ 22751 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.