Cinema

ಮೇಕೆದಾಟು ಪಾದಯಾತ್ರೆ ಬೆಂಬಲಿಸಿದ್ದಕ್ಕೆ ಪ್ರತಿಭಟನೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ನಿಂದ ಬೆಂಬಲ ಸೂಚಿಸಿದನ್ನ ವಿರೋಧಿಸಿ ಸದಸ್ಯರು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದರು.
ನಿಯಮ ಉಲ್ಲಂಘಿಸಿ ಹಣ ಡ್ರಾ ಮಾಡಿದ್ದಾರೆ ಅಂತ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಫಿಲ್ಮ್ ಚೇಂಬರ್, ಚಿತ್ರರಂಗವನ್ನು ಒಂದು ಪಕ್ಷಕ್ಕೆ ಒತ್ತೆ ಇಟ್ಟಿರೋದು ಸರಿಯಲ್ಲ.ಫಿಲ್ಮ್ ಚೇಂಬರ್ ಸದಸ್ಯರ ಒಪ್ಪಿಗೆ ಪಡೆಯದೇ ಕೆಲವರು ಮಾತ್ರ ನಿರ್ಧಾರ ಕೈಗೊಂಡಿದ್ದಾರೆ.ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆ ಇದೆ, ಅದನ್ನೆಲ್ಲಾ ಬಿಟ್ಟು ಪಾದಯಾತ್ರೆಗೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಫಿಲ್ಮ್ ಚೇಂಬರ್ ನವರು ಪಾದಯಾತ್ರೆಗೆ ಸಂಘದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದಕ್ಕೆ ಫಿಲಂ ಚೇಂಬರ್ ನಿಂದ ಶ್ರೀನಿವಾಸ್ ಅವರನ್ನ ವಜಾಗೊಳಿಸಿದ್ದಾರೆ.
ಇವರಿಗೆ ಯಾರು ಏನು ಪ್ರಶ್ನೆ ಮಾಡಬಾರದ ಎಂದು ಕಿಡಿಕಾರಿದರು. ಸದಸ್ಯರು ಪೊಲೀಸರ
ಮದ್ಯಸ್ತಿಕೆಯಲ್ಲಿ ಫಿಲಂ ಚೇಂಬರ್ ಒಳಗೆ ಹೋಗಿ ಮಾತುಕತೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ನಿರ್ಮಾಪಕ ಜೆ‌. ಜೆ ಶ್ರೀನಿವಾಸ್, ನಿರ್ದೇಶಕ ನಾಗರಾಜ್ ಸೇರಿದಂತೆ ಕೆಲವರು ಭಾಗಿಯಾಗಿದ್ದರು.
ಈ ವೇಳೆ ಎನ್ ಎಂ ಸುರೇಶ್ ಮಾತನಾಡಿ, ಮೇಕೆದಾಟು ಹೋರಾಟ ಪಕ್ಷಾತೀತವಾಗಿರೋದು. ನಾಡು ನುಡಿ ಅಂತ ಬಂದ್ರೆ ನಾವು ಬೆಂಬಲಿಸ್ತಿವಿ. ಈ ಬಗ್ಗೆ ನಾವು ಯಾರಿಗೂ ಒತ್ತಾಯ ಮಾಡಿಲ್ಲ ಎಂದರು.

Share Post