ಬೋಟಿಂಗ್ ವೇಳೆ ಸಮುದ್ರಕ್ಕೆ ಬಿದ್ದ ಮಹಿಳೆ: ಖಾಕಿ ರಕ್ಷಣೆ
ಮುಂಬೈ: ಬೋಟಿಂಗ್ ಮಾಡುವ ವೇಳೆ ಆಯತಪ್ಪಿ ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವೀಕೆಂಡದ ಬಂದ್ರೆ ಸಾಕು ಜನ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಬಯಸುತ್ತಾರೆ. ಹಾಗಾಗಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಚಿಲ್ ಮೂಡ್‌ನಲ್ಲಿರುತ್ತಾರೆ. ಇತ್ತೀಚೆಗೆ ಜನ ರಿವರ್ ರ್ಯಾಫ್ಟಿಂಗ್‌ನಂತಹ ಸಾಹಸಮಯ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡ್ತಾರೆ. ಅಂತೆಯೇ ಭಾನುವಾರ ಗೇಟ್ ವೇ ಮುಂಬೈ ಬಳಿ ಸಮುದ್ರದಲ್ಲಿ ಪ್ರವಾಸಕ್ಕೆ ಬಂದಿರುವ ಮಹಿಳೆಯೊಬ್ಬರು ದೋಣಿ ವಿಹಾರ ನಡೆಸುತ್ತಿದ್ರು. ಈ ವೇಳೆ ಜೋರಾದ ಅಲೆ ಬೋಟ್‌ಗೆ ಅಪ್ಪಳಿಸಿದೆ. ನಿಯಂತ್ರಣ ತಪ್ಪಿ ಮಹಿಳೆ ಸಮುದ್ರದಲ್ಲಿ ಬಿದ್ದಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಕರಾವಳಿ ಹಾಗೂ ಕೊಲಾಬಾ ಪೊಲೀಸರು ರಕ್ಷಣಾ ಬೋಟ್‌ನಲ್ಲಿ ತೆರಳಿ ಹಗ್ಗದ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ರಕ್ಷಣಾ ವಿಡಿಯೋವನ್ನು ಪೊಲೀಸರು ಲೈವ್ ಆಗಿ ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪೊಲೀಸರ ಕಾರ್ಯವೈಖರಿಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.
#WATCH | A team of Coastal Police & Colaba Police rescued a woman tourist who was drowning in the sea near Gateway of India, Mumbai today. The woman lost control and fell into the water after a strong ocean current hit her boat: Mumbai Police pic.twitter.com/UQFOfMQ8oK
— ANI (@ANI) January 9, 2022