Districts

ಡಿ.ಕೆ ಶಿವಕುಮಾರ್‌ ವಿರುದ್ಧ ಸಚಿವ ಈಶ್ವರಪ್ಪ ಕಿಡಿ

ಶಿವಮೊಗ್ಗ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ ಪಾದಯಾತ್ರೆ ಮುಂದುವರೆಸಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್‌ ಆರೋಗ್ಯ ಸಿಬ್ಬಂದಿ ತಪಾಸಣೆ ಬಂದಾಗ ಜಾಡಿಸಿದ್ದರು. ಈ ಕುರಿತು ಶಿವಮೊಗ್ಗದಲ್ಲಿ  ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಗೂಂಡಾಗಿರಿ, ದಾದಾಗಿರಿ ಮಾಡುತ್ತಿದ್ದಾರೆ. ಈ ಹಿಂದೆ ಅವರು ಗೂಂಡಾಗಿರಿ ಮಾಡುತ್ತಾರೆ ಅಂತಾ ಕೇಳಿದ್ದೆ. ಆದರೆ ರೀತಿ ವರ್ತಿಸುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಡಿ.ಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಯಾವುದೇ ಪಕ್ಷದವರು ಇರಬಹುದು. ಆದರೆ ಆರೋಗ್ಯ ಬಹಳ ಮುಖ್ಯ.ಇದೇ ಉದ್ದೇಶದಿಂದಲೇ ಕಾಂಗ್ರೆಸ್ ನವರಿಗೆ ಪ್ರಾರ್ಥನೆ ಮಾಡುತ್ತಾ ಬಂದಿದ್ದೇನೆ.ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದರೂ ಅವರಿಗೆ ರಾಜಕೀಯವೇ ಮುಖ್ಯವಾಗಿದೆ ಎಂದರು.
ಇನ್ನು ಪಾದಯಾತ್ರೆಯಲ್ಲಿ ನಟ ಶಿವರಾಜ್‌ ಕುಮಾರ್‌ ಹೋಗದೆ ಇದ್ದಿದ್ದು, ನನಗೆ ಬಹಳ ಸಂತೋಷವಾಯಿತು.ಮೇಕೆದಾಟು ಹೆಸರಿನಲ್ಲಿ ಮಾಡ್ತಿರೋ ರಾಜಕಾರಣದಲ್ಲಿ ಜನಜಾತ್ರೆಯಾಗುತ್ತಿದೆ.ಮುಂಬರುವ ಜಿ.ಪಂ, ತಾಪಂ, ಅಸೆಂಬ್ಲಿ ಚುನಾವಣೆ ಟಿಕೆಟ್ ಗಾಗಿ ಡಿ.ಕೆ ಶಿವಕುಮಾರ್ ಮುಂದೆ ಶೋ ತೋರಿಸಲು ಹೋಗಿದ್ದಾರೆ‌.ಇಂತಹ ಭ್ರಮೆಯಲ್ಲಿ ಏಳೆಂಟು ಸಾವಿರ ಜನರು ರಾಜ್ಯದ ಎಲ್ಲಾ ಭಾಗದಿಂದ ಹೋಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಪಾದಯಾತ್ರೆಗೆ ಹೋಗಿ ಬಂದವರು ಈಡೀ ರಾಜ್ಯಕ್ಕೆ ಕೋವಿಡ್ ಹಚ್ಚುತ್ತಾರೆ. ಸ್ವತಃ ಡಿ.ಕೆ.ಶಿವಕುಮಾರ್ ಮಾಸ್ಕ್ ಹಾಕುತ್ತಿಲ್ಲ. ಅಂತರ ಇಲ್ಲ. ನೀತಿ- ನಿಯಮ ಪಾಲಿಸುತ್ತಿಲ್ಲ.
ಇದರ ಮಧ್ಯ ಅರೆಸ್ಟ್ ಮಾಡ್ಕೋಳ್ಳಿ ಎಂದು ಪೌರುಷದ ಮಾತು ಬೇರೆ ಆಡ್ತಾರೆ.ರಾಜಕೀಯದ ಜೊತೆಗೆ ರಾಜ್ಯದ ಜನರಿಗೆ ಅನ್ಯಾಯ ಮಾಡಬಾರದು‌.ಅವರು ನೀರು ಕೊಡುವ ಬದಲು ರಾಜ್ಯದ ಜನರಿಗೆ ಕೋವಿಡ್ ಕೊಡುವ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಜ್ವರ ಅಂತಾ ಸುಸ್ತಾಗಿ ವಾಪಾಸ್ ಬಂದಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ನಾನು ಚಾಂಪಿಯನ್ ಆಗ್ಬೇಕು. ಸಿಎಂ ಅಗ್ಬೇಕು ಎನ್ನೊ ಲೆಕ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಕೋವಿಡ್ ಹಚ್ಚೋ ಅಧಿಕಾರವನ್ನು ಸೋನಿಯಾ ಗಾಂಧಿ ಕೊಟ್ರಾ…?
ನೀವು ಸಿಎಂ ಆಗೋ ಭ್ರಮೆಯಲ್ಲಿ ರಾಜ್ಯದ ಜನರಿಗೆ ಕೋವಿಡ್ ಹರಡೋ ಪ್ರಯತ್ನ ಒಳ್ಳೆಯದು ಮಾಡಲ್ಲ. ಮೊದಲನೇದಾಗಿ ನೀವು ಸಿಎಂ ಆಗುವುದೇ ಕನಸು ಅಷ್ಟೇ. ರಾಜ್ಯದ ಜನರಿಗೆ ಕೋವಿಡ್ ಹರಡುವುದನ್ನು ನಾನು ಖಂಡಿಸುತ್ತೇನೆ.ಸಿಎಂ, ಗೃಹಸಚಿವರು ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳುವ ವಿಚಾರ ಬೇರೆ.ನೀವು ಸಿಎಂ ಆಗಿದ್ದವರು. ನೀತಿ- ನಿಯಮ ಮೀರಿ ಹೋದರೇ ನಾವೇನ್ ಮಾಡ್ಬೇಕು..? ನಿಮ್ಮ ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಬೇಕಾ.‌? ಎಂದು ಪ್ರಶ್ನಿಸಿದ್ದಾರೆ. ನಾವು ಜೈಲಿಗೆ ಹೋಗೋಕೆ ರೆಡಿ. ಪ್ರಾಣ ಹೋದರೂ ಕೂಡ ಬಿಡಲ್ಲ.ಈ ರೀತಿ ಪೌರುಷದ ಮಾತನಾಡೋಕೆ ನಮಗೂ ಬರುತ್ತೇ‌. ಇದರಿಂದ ಜನಕ್ಕೆ ಒಳ್ಳೆಯದಾಗಲ್ಲ. ನೀರು ಸಿಗಲ್ಲ. ಬದಲಿಗೆ ಕೋವಿಡ್ ಸಿಗುತ್ತೇ ಎಂದು ವ್ಯಂಗ್ಯವಾಡಿದರು.

Share Post