Districts

ಲಿಂಗಸೂಗೂರಿನಲ್ಲಿ ಲಘು ಭೂಕಂಪನ; ಕೆಲ ಸೆಕೆಂಡ್ ನಡುಗಿದ ಭೂಮಿ

ರಾಯಚೂರು; ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಲಘು ಭೂಕಂಪನವಾಗಿದೆ. ಭಾನುವಾರ ಮಧ್ಯರಾತ್ರಿ ಭೂಮಿ ಕಂಪಿಸಿದೆ. ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಭೂಮಿ ನಡುಗಿದೆ.

 

  ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಹಟ್ಟಿ ಗ್ರಾಮದ ಸುತ್ತಲಿನ 2.6 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ. ಲಘು ಭೂಕಂಪನದಿಂದ ಗ್ರಾಮಗಳಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

Share Post