Sports

Nz Vs Ban Test : ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾ

ಮೌಂಟ್‌ ಮಾಂಗನೂಯಿ : ಬಾಂಗ್ಲಾ ಮತ್ತು ನ್ಯೂಜಿಲೆಂಡ್‌ ನಡುವೆ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಪಡೆ ಬಾಂಗ್ಲಾ ಹುಲಿಗಳಿಗೆ ಶರಣಾಗಿದೆ. ಕಿವೀಸ್‌ ಪಡೆ ಎದುರು ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಟೆಸ್ಟ್‌ ಚಾಂಪಿಯನ್ಸ್‌ ಎನಿಸಿಕೊಂಡ ತಂಡದ ಎದುರು ಬಾಂಗ್ಲಾ ಗೆದ್ದಿರುವುದರಿಂದ ಅವರ ಖುಷಿ ಡಬಲ್‌ ಆಗಿದೆ

ಇಬಾದತ್‌ ಹುಸೇನ್‌ ಮಾರಕ ಬೌಲಿಂಗ್‌ ದಾಳಿಗೆ ಕಿವೀಸ್‌ ಪಡೆ ಮಂಡಿಯೂರಿ ಶರಣಾಗಿದೆ. ಒಟ್ಟಾರೆಯಾಗಿ 7 ವಿಕೆಟ್‌ ಪಡೆದ ಇಬಾದತ್‌ ಹುಸೇನ್‌ ಸೆಕೆಂಡ್‌ ಇನ್ನಿಂಗ್ಸ್‌ ಅಲ್ಲಿ ೬ ವಿಕೆಟ್‌ ಪಡೆದು ನ್ಯೂಜಿಲೆಂಡ್‌ ಬ್ಯಾಟ್ಸ್‌ಮೆನ್‌ಗಳನ್ನು ಕಾಡಿದರು.  ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಪಡೆದಿದ್ದ ಬಾಂಗ್ಲಾದೇಶಕ್ಕೆ ಗೆಲುವಿನ ಹಾದಿ ಸಲೀಸಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಆಡಲು ಬಂದ ನ್ಯೂಜಿಲೆಂಡ್‌ ತಂಡ ಕೇವಲ ೧೬೯ ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು. ಕೇವಲ 40 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾದೇಶ ತಂಡ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತ್ತು.

 

 

Share Post