Sports

Ind Vs Sa 2nd Test : K L ರಾಹುಲ್‌ ನಾಯಕ, ವಿರಾಟ್‌ ಕೊಹ್ಲಿ ಔಟ್‌

ಜೋಹಾನ್ಸ್‌ಬರ್ಗ್‌ : ಭಾರತ ಮತ್ತು ದ.ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ ಇಂದಿನಿಂದ ಶುರುವಾಗಿದೆ. ಆದರೆ ಈ ಟೆಸ್ಟ್‌ಗೆ ನಾಯಕನಾಗಿ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತಿರೋದು K L ರಾಹುಲ್.‌  ಈ ಪಂದ್ಯದಿಂದ ವಿರಾಟ್‌ ಕೊಹ್ಲಿ ಹೊರಗುಳಿದಿದ್ದಾರೆ. ಇದು ಭಾರತದ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಶಾಕಿಂಗ್‌ ಸುದ್ದಿಯಾಗಿದೆ.

ಬೆನ್ನುಮೂಳೆಯ ಸೆಳೆತದಿಂದ ವಿರಾಟ್ ಕೊಹ್ಲಿ ಈ ಟೆಸ್ಟ್‌ನಲ್ಲಿ ಆಡುತ್ತಿಲ್ಲ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ಎರಡನೇ ಪಂದ್ಯದಿಂದ ಹೊರಗುಳಿದಿರುವ ವಿರಾಟ್‌ ಕೊಹ್ಲಿ ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಟಾಸ್‌ ಗೆದ್ದ ರಾಹುಲ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಬದಲು ಹನುಮಾ ವಿಹಾರಿ ಕಣಕ್ಕಿಳಿಯಲಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್‌ ಆಡಿ ಸರಣಿ ಗೆದ್ದಿದ್ದರೆ ಹೊಸ ದಾಖಲೆ ಸೃಷ್ಠಿ ಆಗುತ್ತಿತ್ತು. ಮುಂದಿನ ಪಂದ್ಯದಲ್ಲಿ ಕಣಕ್ಕಿಳಿದರೆ ಕೂಡ ಈ ಸಾಧನೆ ಮಾಡುವ ಅವಕಾಶ ಇದೆ.

Share Post