ಗೋವಾದ ಬಾಗಾ ಬೀಚ್‌ನಲ್ಲಿ ಜನ ಜಾತ್ರೆ: 3ನೇ ಅಲೆಗೆ ಅದ್ದೂರಿ ಸ್ವಾಗತ
ಗೋವಾ: ಕೊರೊನಾ ಮೂರನೇ ಅಲೆಯನ್ನು ತಪ್ಪಿಸಲು, ಜನರ ಆರೋಗ್ಯ ಕಾಪಾಡಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡು ಅತಿಯಾಗಿ ಜನ ಸೇರದಂತೆ,ಪೃಟಿ ಮಾಡದಂತೆ ಆದೇಶ ಕೂಡ ಮಾಡಿತ್ತು. ಆದ್ರೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಗೋವಾದ ಬಾಗಾ ಬೀಚ್‌ನಲ್ಲಿ ಜನ ಜಾತ್ರೆ ನಡೆದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗೆ ಎಲ್ಲಾ ರಾಜ್ಯಗಳಲ್ಲೂ ಕಟ್ಟು-ನಿಟ್ಟಿನ ಕ್ರಮಗಳನ್ನು ವಿಧಿಸಿದೆ. ಹಾಗಾಗಿ ತಮ್ಮ ಜಾಲಿ ಮೂಡಿಗೆ ಎಲ್ಲರೂ ಗೋವಾ ಆಯ್ಕೆ ಮಾಡಿಕೊಂಡು ನ್ಯೂ-ಇಯರ್ ಸೆಲಬ್ರೇಷನ್‌ಗೆ ಗೋವಾಕ್ಕೆ ಹಾರಿದ್ದಾರೆ. ನೂರಲ್ಲ..ಇನ್ನೂರಲ್ಲ ಸುಮಾರು ಸಾವಿರಾರು ಜನ ಒಂದೇ ಬೀಚ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಈಗಾಗಲೇ ಕೋವಿಡ್ ಆತಂಕದಲ್ಲಿ ಸರ್ಕಾರಕ್ಕೆ ಇದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಬೀಚ್‌ಬಲ್ಲಿ ಪ್ರವಾಸಿಗರ ದಂಡು ದಂಡಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದ್ದು ನೆಟ್ಟಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಾದಲ್ಲಿ ಕೊರೊನಾ ಮೂರನೇ ಅಲೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತಿದೆ. ಹೊಸ ವರ್ಷದ ಜೊತೆಗೆ ಕೊರೊನಾ ವೈರಸ್ ಕೂಡ ಉಚಿತವಾಗಿ ಬರಲಿದೆ ಎಂದು ಕಿಡಿ ಕಾರಿದ್ದಾರೆ. ದೊಡ್ಡಮಟ್ಟದ ಜನಸಂದಣಿ ಕಂಡು ಪಾಸಿಟಿವಿಟಿ ರೇಟ್ ಕೂಡ ಅಧಿಕವಾಗಲಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.