ಲಂಕಾ ವಿರುದ್ಧದ ಟಿ20 ಸರಣಿಗೆ ಕೊಹ್ಲಿ ಅಲಭ್ಯ
ಬೆಂಗಳೂರು : ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ T20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬಿಸಿಸಿಐ ವಿರಾಟ್ ಅವರಿಗೆ ವಿಶ್ರಾಂತಿ ನೀಡಲು ಮನಸ್ಸು ಮಾಡಿದೆ. ಆದರೆ ಅವರು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗಿರುತ್ತಾರೆ.
ಇನ್ನು ಶ್ರೀಲಂಕಾ ಸರಣಿಗೆ ಜಡೇಜಾ ಮತ್ತು ಬೂಮ್ರಾ ಕಮ್‌ಬ್ಯಾಕ್ ಮಾಡುವುದು ಖಚಿತವಾಗಿದೆ. ಮೊಣಕಾಲು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಜಡೇಜಾ ಅವರು ಈಗ ಫಿಟ್ ಆಗಿ ರೆಡಿಯಾಗಿದ್ದಾರೆ. ತಂಡಕ್ಕೆ ಜಡೇಜಾ ವಾಪಸ್ ಆಗುವುದರಿಂದ ಹೊಸ ಆಟಗಾರರ ಅವಕಾಶ ಕೈತಪ್ಪಲಿದೆ. ಆದರೆ ವಿಶ್ವಕಪ್ ಗಮನದಲ್ಲಿಟ್ಟುಕೊಂಡಿರುವ ಭಾರತ ಅನುಭವಿ ಆಟಗಾರರ ಮೇಲೆ ಅವಲಂಬಿತವಾಗುವುದು ಕನ್‌ಫರ್ಮ್ .
ಜಸ್ಪ್ರೀತ್ ಬುಮ್ರಾ ಕೂಡ ಈ ಸರಣಿಯಲ್ಲಿ ಆಡಲಿದ್ದಾರೆ. ವಿಶ್ರಾಂತಿಯಲ್ಲಿದ್ದ ಬುಮ್ರಾ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ.
ಇನ್ನು ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಲಿದ್ದಾರೆ. ಅಲ್ಲಿಗೆ ರೋಹಿತ್ ಅವರು ಭಾರತ ತಂಡದ ಎಲ್ಲಾ ಮಾದರಿಗೂ ನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶ್ರೀಲಂಕಾ ಸರಣಿ ಶುರುವಾಗುವ ಮುನ್ನ ಟೆಸ್ಟ್ ನಾಯಕ ಯಾರೆಂದು ಪ್ರಕಟಣೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.