Districts

ದಾವಣಗೆರೆಯಲ್ಲಿ ಸೊಸೆ ವಿರುದ್ಧ ಅತ್ತೆ ಮೇಲುಗೈ

ದಾವಣಗೆರೆ: 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಹೊರಗೆಬೀಳಲಿದೆ. ತೀವ್ರ ಕೂತಹಲ ಮೂಡಿಸಿದ್ದ ಚುನಾವಣೆ ಫಲಿತಾಂಶ ಇನ್ನೇನು ಕೆಲ ಕ್ಷಣಗಳಲ್ಲಿ ಹೊರಗೆಬರಲಿದೆ. ದಾವಣಗೆರೆ ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆಲುವಿನ ನಗೆ ಬೀರಿದ್ದಾರೆ. ಚನ್ನಗಿರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ೨ನೇ ವಾರ್ಡ್‌ ಗೆ ಚುನಾವಣೆ ಸೋಮವಾರ ನಡೆದಿತ್ತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೪ ಸ್ಥಾನಗಳಿದ್ದವು. ಈ ವೇಳೆ ಮಹಿಳೆಯೊಬ್ಬರು ೨ ನೇ ವಾರ್ಡ್‌ ನಲ್ಲಿ ನಿಧನರಾದರು. ಹೀಗಾಗಿ ಈ ಸ್ಥಾನಕ್ಕೆ ಅತ್ತೆ ಪಾರ್ವತಮ್ಮ ಮತ್ತು ಸೊಸೆ ಲಕ್ಷಮ್ಮ ಸ್ಪರ್ಧಿಸಿದ್ದರು. ಅತ್ತೆ ಪಾರ್ವತಮ್ಮ 91 ಮತಗಳಿಂದ ಜಯಗಳಿಸಿದ್ದಾರೆ.

Share Post