ಜೈಲಿನಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ!
ತಿರುವನಂತಪುರಂ(Kerala); ತಾಯಿ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ.. ಮಕ್ಕಳ ಎಂಥಹವರೇ ಆಗಿದ್ದರೂ ಅವರ ಮೇಲಿನ ಪ್ರೀತಿ ಮಾತ್ರ ತಾಯಿಗೆ ಕಡಿಮೆಯಾಗೋದಿಲ್ಲ.. ಅದ್ರಲ್ಲೂ ಇಲ್ಲೊಬ್ಬರು ತಾಯಿ ಇದ್ದಾರೆ.. ಈ ತಾಯಿ ಜೈಲಿನಲ್ಲಿರುವ ತನ್ನ ಮಗನಿಗಾಗಿ ಏನನ್ನು ತೆಗೆದುಕೊಂಡು ಹೋಗಿದ್ದಳು ಗೊತ್ತಾ..?. ಮಗನಿಗೆ ಇಷ್ಟ ಅಂತ ಗಾಂಜಾವನ್ನೇ ತೆಗೆದುಕೊಂಡು ಜೈಲಿಗೆ ಹೋಗಿದ್ದಾಳೆ..
ಇದನ್ನೂ ಓದಿ; ಸರ್ಕಾರ ಬದಲಾದರೂ ಗೃಹಲಕ್ಷ್ಮೀ ಹಣ ಬರುತ್ತೆ!; ಹೇಗೆ ಗೊತ್ತಾ..?
ಕೇರಳದ ತ್ರಿಶ್ಯೂರ್ ಜಿಲ್ಲೆಯ ವಿಯ್ಯೂರು ಸಬ್ ಜೈಲ್ ನಲ್ಲಿ ಈ ಘಟನೆ ನಡೆದಿದೆ.. ಲತಾ ಎಂಬುವವರೇ ಜೈಲಿಗೆ ಗಾಂಜಾ ತೆಗೆದುಕೊಂಡು ಹೋಗಿ ಸಿಕ್ಕಿಬಿದ್ದ ಮಹಿಳೆ.. ಲತಾ ಅವರ ಮಗ ಹರಿಕೃಷ್ಣ ಜೈಲಿನಲ್ಲಿದ್ದಾನೆ.. ಅವನಿಗಾಗಿ ಲತಾ ಅವರು 80 ಗ್ರಾಂ ಗಾಂಜಾ ತೆಗೆದುಕೊಂಡು ಹೋಗಿದ್ದಳು.. ಈ ವೇಳೆ ಜೈಲಿನ ಸಿಬ್ಬಂದಿ ತಪಾಸಣೆ ಮಾಡಿದಾಗ ಗಾಂಜಾ ಸಿಕ್ಕಿದೆ.. ಕೂಡಲೇ ಮಹಿಳೆಯನ್ನು ಜೈಲಧಿಕಾರಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ಮಾಜಿ ಶಾಸಕನ ಬೆತ್ತಲೆ ಮೆರವಣಿಗೆ ಮಾಡ್ತಾರಂತೆ ಕಾಂಗ್ರೆಸ್ ಶಾಸಕ!
ಜೈಲಿನ ಪ್ರವೇಶ ದ್ವಾರದಲ್ಲಿ ಜೈಲು ಸಿಬ್ಬಂದಿ ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ.. ಬ್ಯಾಗ್ನಲ್ಲಿ ಬಚ್ಚಿಟ್ಟುಕೊಂಡು ಮಹಿಳೆ ಗಾಂಜಾ ತೆಗೆದುಕೊಂಡು ಹೋಗುತ್ತಿದ್ದಳು.. ಈ ವೇಳೆ ಆಕೆ ಸಿಕ್ಕಿಬಿದ್ದಿದ್ದಾಳೆ.. ಈ ಹಿಂದೆಯೂ ಮಹಿಳೆ ಲತಾ ತನ್ನ ಮಗನನ್ನು ನೋಡಲು ಹಲವು ಬಾರಿ ಜೈಲಿಗೆ ಬಂದಿದ್ದರು.. ಈ ವೇಳೆಯೂ ಆಕೆ ಗಾಂಜಾ ತಂದಿದ್ದಳೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ..