BengaluruCrime

ರೇವ್‌ ಪಾರ್ಟಿ ಪ್ರಕರಣ; ಎಲ್ಲರನ್ನೂ ಯಾಮಾರಿಸಿದ್ದ ನಟಿ ಹೇಮಾ ರಕ್ತದಲ್ಲಿ ಡ್ರಗ್ಸ್‌ ಸೇವನೆ ಪತ್ತೆ!

ಬೆಂಗಳೂರು; ಬೆಂಗಳೂರಿನಲ್ಲಿ ಕಳೆದ ವೀಕೆಂಡ್‌ ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ತಾವು ಭಾಗವಹಿಸಿಯೇ ಇಲ್ಲ ಎಂದು ಎಲ್ಲರನ್ನೂ ಯಾಮಾರಿಸಿದ್ದ ತೆಲುಗು ನಟಿ ಹೇಮಾ ನಿಜ ಬಣ್ಣ ಬಯಲಾಗಿದೆ.. ಆಕೆ ರೇವ್‌ ಪಾರ್ಟಿಯಲ್ಲಿ ಇದ್ದರು ಅನ್ನೋದನ್ನು ಈ ಹಿಂದೆ ಪೊಲೀಸರು ದೃಢಪಡಿಸಿದ್ದರು.. ಇನ್ನು ನಟಿ ಹೇಮಾ ಅವರ ರಕ್ತದ ಸ್ಯಾಂಪಲ್‌ ಅನ್ನು ಪರೀಕ್ಷೆಗಾಗಿ ತೆಗೆದುಕೊಂಡಿದ್ದರು.. ಇದೀಗ ಆಕೆಯ ರಕ್ತದ ಮಾದರಿಯಲ್ಲಿ ಡ್ರಗ್ಸ್‌ ಸೇವನೆ ಮಾಡಿರುವುದು ಖಚಿತವಾಗಿದೆ.. ಇದರಿಂದಾಗಿ ನಟಿ ಹೇಮಾ ಅವರ ರಂಗಿನ ಆಟ ಬಟಾ ಬಯಲಾಗಿದೆ..

ಬೆಂಗಳೂರಿನ ಹೊರವಲಯದ ಜಿ.ಆರ್‌. ಫಾರ್ಮ್‌ ಹೌಸ್‌ನಲ್ಲಿ ಬರ್ತ್‌ ಡೇ ಹೆಸರಲ್ಲಿ ರೇವ್‌ ಪಾರ್ಟಿ ನಡೆದಿತ್ತು.. ಇದರಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಅರಿತ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.. ಈ ವೇಳೆ ತೆಲುಗಿನ ಹಲವು ನಟ, ನಟಿಯರು ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ.. ಇದೇ ಸ್ಥಳದಲ್ಲಿ ತೆಲುಗಿನ ಖ್ಯಾತ ನಟಿ ಹೇಮಾ ಕೂಡಾ ಇದ್ದರು.. ಆದ್ರೆ ವಿಚಾರಣೆ ಬಳಿಕ ಬಿಡುಗಡೆಯಾಗಿದ್ದ ಹೇಮಾ, ಅಲ್ಲಿಂದ ವಿಡಿಯೋ ಮಾಡಿ, ನಾನು ಹೈದರಾಬಾದ್‌ ನಲ್ಲೇ ಇದ್ದೇನೆ.. ನನ್ನ ತೋಟದ ಮನೆಯಲ್ಲೇ ಎಂಜಾಯ್‌ ಮಾಡುತ್ತಿದ್ದೇನೆ ಎಂದು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.. ಈ ಮೂಲಕ ಜನರನ್ನು ಯಾಮಾರಿಸೊ ಪ್ರಯತ್ನ ಮಾಡಿದ್ದರು..

ಇತ್ತ ಪೊಲೀಸರು ಹೇಮಾ ಅವರ ರಕ್ತದ ಸ್ಯಾಂಪಲ್‌ ಅನ್ನು ಲ್ಯಾಬ್‌ ಕಳುಹಿಸಿದ್ದರು.. ಅದರ ವರದಿ ಬಂದಿದ್ದು, ಹೇಮಾ ಅವರು ಡ್ರಗ್ಸ್‌ ಸೇವನೆ ಮಾಡಿರುವುದು ಸಾಬೀತಾಗಿದೆ.. ರೇವ್ ಪಾರ್ಟಿ ಭಾಗಿಯಾಗಿದ್ದ 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ..

ಭಾನುವಾರ ರಾತ್ರಿ ದಾಳಿ ಮಾಡಿದಾಗ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಸೇರಿ ಕೋಟ್ಯಂತರ ಬೆಲೆಬಾಳುವ ಡ್ರಗ್ಸ್‌ ಅಲ್ಲಿ ಪತ್ತೆಯಾಗಿತ್ತು.. ರಕ್ತದಲ್ಲಿ ಡ್ರಗ್ಸ್‌ ಸೇವನೆ ಪತ್ತೆಯಾಗಿರುವುದರಿಂದ ನಟಿ ಹೇಮಾಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡುವ ಸಾಧ್ಯತೆ ಇದೆ..

 

Share Post