ಸರ್ಕಾರ ಬದಲಾದರೂ ಗೃಹಲಕ್ಷ್ಮೀ ಹಣ ಬರುತ್ತೆ!; ಹೇಗೆ ಗೊತ್ತಾ..?
ಬೆಂಗಳೂರು; ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ.. ಪ್ರತಿ ತಿಂಗಳೂ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುತ್ತಿದೆ.. ನೇರವಾಗಿ ಯಜಮಾನಿಯ ಅಕೌಂಟ್‌ಗೆ ಈ ಹಣ ಜಮೆಯಾಗುತ್ತಿದೆ.. ಆದ್ರೆ ಈ ಯೋಜನೆ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ.. ಸರ್ಕಾರ ಕೊಟ್ಟಷ್ಟು ದಿನ ಪಡೆಯಬಹುದು ಅಷ್ಟೇ.. ಸದ್ಯಕ್ಕೆ ರಾಜ್ಯದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವದಲ್ಲಿದೆ.. ಕಾರ್ಯವೈಖರಿ ಹಾಗೂ ನಾಯಕ ಹೇಳಿಕೆಗಳು ನೋಡುತ್ತಿದ್ದರೆ ಐದು ವರ್ಷವೂ ಈ ಯೋಜನೆ ಮುಂದುವರೆಯುತ್ತದೆ.. ನಂತರ ಬರುವ ಸರ್ಕಾರ ಮುಂದುವರೆಸುತ್ತದೋ ಇಲ್ಲವೋ ಗೊತ್ತಿಲ್ಲ… ಆದ್ರೆ ಮುಂದೆ ಯಾವುದಾದರೂ ಸರ್ಕಾರ ಬರಲಿ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಜೀವನಪೂರ್ತಿ ತಿಂಗಳಿಗೆ ಎರಡು ಸಾವಿರ ರೂಪಾಯಿ ಪಡೆಯಬಹುದು.. ಅಷ್ಟೇ ಏಕೆ ಸತ್ತ ನಂತರ ಮಕ್ಕಳಿಗೂ ಇದನ್ನು ವರ್ಗಾಯಿಸಬಹುದು..!
ಇದನ್ನೂ ಓದಿ; ಮಾಜಿ ಶಾಸಕನ ಬೆತ್ತಲೆ ಮೆರವಣಿಗೆ ಮಾಡ್ತಾರಂತೆ ಕಾಂಗ್ರೆಸ್ ಶಾಸಕ!
ಅದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆನಾ..?
ನಾನು ಹೇಳುತ್ತಿರುವುದನ್ನು ನೋಡಿ ನೀವು ನಗಾಡಬಹುದು.. ಸರ್ಕಾರದವರು ಐದು ವರ್ಷ ಕೊಡೋದೇ ಹೆಚ್ಚು.. ಅಂತಾದ್ರಲ್ಲಿ ಜೀವನಪರ್ಯಂತ ಗೃಹಲಕ್ಷ್ಮೀ ಹಣ ಹೇಗೆ ಪಡೆಯೋದಕ್ಕೆ ಆಗುತ್ತೆ ಅಂತ ನೀವು ಕೇಳಬಹುದು.. ಆದ್ರೆ ನಾನು ಹೇಳ್ತಾ ಇರೋದು ಸರ್ಕಾರ ಐದು ವರ್ಷದ ನಂತರ ಕೊಡಲಿ ಬಿಡಲಿ, ನಿಮಗೆ ಮಾತ್ರ ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿ ನಿಮ್ಮ ಅಕೌಂಟ್‌ಗೆ ಜಮೆಯಾಗುತ್ತದೆ.. ಅಂತಹದ್ದೊಂದು ಅದ್ಭುತ ಯೋಜನೆ ಇದು.. ನೀವು ಮನಸ್ಸು ಮಾಡಿದರೆ ಖಂಡಿತವಾಗಿಯೂ ಜೀವನಪರ್ಯಂತ ಎರಡು ಸಾವಿರ ರೂಪಾಯಿ ಹಣವನ್ನು ಗೃಹಲಕ್ಷ್ಮೀ ಯೋಜನೆ ಹಣವಾಗಿ ಪಡೆಯಬಹುದು..
ಇದನ್ನೂ ಓದಿ; ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಐದು ವರ್ಷ ಗೃಹ ಲಕ್ಷ್ಮೀ ಹಣ ಹೂಡಿಕೆ ಮಾಡಬೇಕು;
ಗೃಹಲಕ್ಷ್ಮೀ ಹಣ ಕೊಡುವುದಕ್ಕಿಂತ ಮುಂಚೆಯೂ ಜನ ಜೀವನ ಮಾಡುತ್ತಿದ್ದರು.. ಇದೊಂದು ಎಕ್ಸ್ಟಾ ಇನ್‌ಕಂ ಆಗಿ ಈಗ ಗೃಹಲಕ್ಷ್ಮೀ ಹಣ ಬರುತ್ತಿದೆ.. ಇದರ ಹೊರತಾಗಿ ನೀವು ದುಡಿಮೆ ಮಾಡಿ ಜೀವನ ಮಾಡುತ್ತಿದ್ದೀರಾದರೆ, ಗೃಹಲಕ್ಷ್ಮೀ ಹಣವನ್ನು ಹೂಡಿಕೆ ಮಾಡಿ.. ಐದು ವರ್ಷದ ಕಾಲ ನೀವು ಈ ಹಣವನ್ನು ಎಸ್‌ಐಪಿ ಅಂದರೆ ಸಿಸ್ಟಮೇಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುತ್ತಾ ಬಂದರೆ, ನಂತರದ ತಿಂಗಳಿಂದ ನೀವು ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿ ಬಡ್ಡಿ ರೂಪದಲ್ಲಿ ಪಡೆಯಬಹುದು.. ಅಂದರೆ ನೀವು ಈ ಐದು ವರ್ಷ ಗೃಹ ಲಕ್ಷ್ಮೀ ಹಣವನ್ನು ಖರ್ಚು ಮಾಡದೇ ಉಳಿಸಿ ಎಸ್‌ಐಪಿಯಲ್ಲಿ ತೊಡಗಿಸುತ್ತಾ ಬಂದರೆ, ಐದು ವರ್ಷದ ನಂತರ ನಿಮಗೆ ಹಣವೂ ಉಳಿಯಲಿದೆ.. ಜೊತೆಗೆ ಆ ಹಣಕ್ಕೆ ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಬಡ್ಡಿ ರೂಪದಲ್ಲಿ ಪಡೆದುಕೊಳ್ಳಬಹುದು..
ಇದನ್ನೂ ಓದಿ; ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲವಂತೆ!
ತಿಂಗಳಿಗೆ 2 ಸಾವಿರ ಹೂಡಿಕೆ ಮಾಡಿದರೆ ಎಷ್ಟಾಗುತ್ತೆ..?;
ನೀವು ಐದು ವರ್ಷಗಳ ಕಾಲ ಗೃಹಲಕ್ಷ್ಮೀ ಯೋಜನೆಯಲ್ಲಿ ಬಂದ ಹಣವನ್ನು ಎಸ್‌ಐಪಿಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ.. ಈಗಿನ ಮಾರುಕಟ್ಟೆಯ ಆಧಾರದ ಮೇಲೆ ಹೇಳೋದಾದರೆ ನಿಮಗೆ ಕನಿಷ್ಠ ವರ್ಷದಕ್ಕೆ ಶೇ.15ರಷ್ಟು ರಿಟರ್ನ್ಸ್ ಸಿಗುತ್ತದೆ.. ಅಂದರೆ ಐದು ವರ್ಷದಲ್ಲಿ ನೀವು, 1,20,000 ಸಾವಿರ ಹೂಡಿಕೆ ಮಾಡಿರುತ್ತೀರಿ.. ಐದು ವರ್ಷದ ಆದ ಮೇಲೆ ನಿಮಗೆ ಇದಕ್ಕೆ 59,363 ರೂಪಾಯಿ ಬಡ್ಡಿ ಬಂದಿರುತ್ತದೆ.. ಎರಡೂ ಸೇರಿಸಿದರೆ, ಐದನೇ ವರ್ಷ ನಿಮ್ಮ ಕೈಗೆ 1,79,363 ರೂಪಾಯಿ ಬರುತ್ತದೆ..
ಈ ಹಣದಿಂದ ನಿಮಗೆ ತಿಂಗಳಿಗೆ 2 ಸಾವಿರ ಬಡ್ಡಿ!
ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದ ಐದು ವರ್ಷಕ್ಕೆ ಬರುವ 1,79,363 ಹಣವನ್ನು ನೀವು ಹೂಡಿಕೆ ಮಾಡಿದರೆ ನಿಮಗೆ ವರ್ಷಕ್ಕೆ 26,904 ಬಡ್ಡಿ ಸಿಗುತ್ತದೆ.. ಅಂದರೆ ತಿಂಗಳಿಗೆ 2000 ರೂಪಾಯಿಗೂ ಹೆಚ್ಚು ಹಣ ಸಿಕ್ಕಂತಾಗುತ್ತದೆ.. ಹಾಗೆ ನೀವು ಮಾಡಿದರೆ ನಿಮ್ಮ ಹಣವೂ ಹಾಗೆಯೇ ಇರುತ್ತದೆ.. ಜೀವನಪೂರ್ತಿ ಎರಡು ಸಾವಿರ ರೂಪಾಯಿಗೂ ಹೆಚ್ಚು ಹಣ ತೆಗೆದುಕೊಳ್ಳುತ್ತಾ ಹೋಗಬಹುದು.. ನೀವು ತೀರಿಕೊಂಡ ಮೇಲೂ ನಿಮ್ಮ ನಂಬಿಕೊಂಡವರಿಗೆ ಪ್ರತಿ ತಿಂಗಳೂ ಎರಡು ಸಾವಿರ ರೂಪಾಯಿ ಬರುತ್ತಿರುತ್ತದೆ.. ಜೊತೆಗೆ ಅಸಲು ಹಣ ಹಾಗೆಯೇ ಇರುತ್ತದೆ..