ಕೋರ್ಟ್ ಟೆರೇಸ್ ಮೇಲೆ ವಕೀಲೆಗೆ ಚುಂಬಿಸಿದ ಸರ್ಕಾರಿ ವಕೀಲ!
ಹೈದರಾಬಾದ್; ಸಹೋದ್ಯೋಗಿ ಮಹಿಳಾ ವಕೀಲೆಗೆ ಸರ್ಕಾರಿ ವಕೀಲರೊಬ್ಬರು ಹೈಕೋರ್ಟ್ ಟೆರೇಸ್ ಮೇಲೆ ಬಲವಂತವಾಗಿ ಚುಂಬಿಸಿದ್ದು ಈ ಸಂಬಂಧ ಕೇಸ್ ದಾಖಲಾಗಿದೆ. ಸಂಜಯ್ ಕುಮಾರ್ ಎಂಬ ವಕೀಲನ ವಿರುದ್ಧ ಕೇಸ್ ದಾಖಲಿಸಲಾಗಿದೆ..
ಫೆಬ್ರವರಿ ತಿಂಗಳಲ್ಲಿ ಹೈದರಾಬಾದ್ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿತ್ತು.. ಮಾಜಿ ಸರ್ಕಾರಿ ವಕೀಲ ಸಂಜಯ್ ಕುಮಾರ್ ಎಂಬುವವರು ಕೋರ್ಟ್ ಟೆರೇಸ್ ಮೇಲೆ ಮಹಿಳಾ ವಕೀಲೆಗೆ ಕರೆದು ಮುತ್ತಿಡುವಂತೆ ಕೇಳುತ್ತಾರೆ.. ನಂತರ ಆತನೇ ಬಲವಂತದಿಂದ ಚುಂಬಿಸುತ್ತಾನೆ.. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.. ಇದೀಗ ಮಹಿಳಾ ವಕೀಲೆ ದೂರು ದಾಖಲಿಸಿದ್ದಾಳೆ.
ವಕೀಲ ಸಂಜಯ್ ಕುಮಾರ್ ನ್ಯಾಯಾಲಯದ ಆವರಣದಲ್ಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ಆಸೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನನ್ನು ನಿರಂತರವಾಗಿ ಹಿಂಬಾಲಿಸಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ..
ಆರೋಪಿ ವಿರುದ್ಧ ಚಾರ್ಮಿನಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354ಡಿ ಮತ್ತು 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.