ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಹೃದ್ರೋಗ ಹೆಚ್ಚಳ!; 5 ವರ್ಷದಲ್ಲಿ 160 ಮಕ್ಕಳ ದುರ್ಮರಣ!
ವಿಜಯಪುರ; ಕೊರೊನಾ ಬಂದು ಹೋದ ಮೇಲೆ ಕುಸಿದುಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ.. ಅದ್ರಲ್ಲೂ ಯುವಕರೂ ಕೂಡಾ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.. ಇದು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದೆ.. ಹೀಗಿರುವಾಗಲೇ, ರಾಜ್ಯದಲ್ಲಿ ಪುಟ್ಟ ಮಕ್ಕಳಲ್ಲಿ ಹೃದ್ರೋಗ ಜಾಸ್ತಿಯಾಗುತ್ತಿದೆ ಅನ್ನೋದು ಮತ್ತಷ್ಟು ಆತಂಕ ಹೆಚ್ಚಿಸಿದೆ.. 5 ವರ್ಷದೊಳಗಿನ ಮಕ್ಕಳಿಗೂ ಹೃದ್ರೋಗ ಹೆಚ್ಚಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ; ಆ ರಾಜಕಾರಣಿಯ ಕಾಮದಾಟಕ್ಕೆ ಲೈವ್‌ನಲ್ಲೇ ಕಣ್ಣೀರಿಟ್ಟ ಖ್ಯಾತ ನಟಿ!
ವಿಜಯಪುರ ಜಿಲ್ಲೆಯಲ್ಲಿ ಐದು ವರ್ಷದಿಂದೀಚೆಗೆ 5 ವರ್ಷದೊಳಗಿನ 160 ಮಕ್ಕಳು ಹೃದ್ರೋಗದಿಂದ ಸಾವನ್ನಪ್ಪಿದ್ದಾರೆ.. ಮಾರ್ಚ್‌ನಿಂದೀಚೆಗೇ ವಿಜಯಪುರ ಜಿಲ್ಲೆಯಲ್ಲಿ 18 ಮಕ್ಕಳು ಹೃದ್ರೋಗಕ್ಕೆ ಬಲಿಯಾಗಿವೆ. ಇಡೀ ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 5 ವರ್ಷದೊಳಗಿನ 500 ಮಕ್ಕಳು ಈ ಹೃದಯ ಸಮಸ್ಯೆಗೆ ಬಲಿಯಾಗಿದ್ದಾರೆ. ಎಳೆ ಕಂದಮ್ಮಗಳು ಹೃದ್ರೋಗಕ್ಕೆ ತುತ್ತಾಗುತ್ತಿರುವುದು, ವೈದ್ಯರಿಗೂ ಹಾಗೂ ಪೋಷಕರಿಗೂ ಕಂಗಾಲು ತರಿಸಿದೆ..
ಹೀಗಿರುವಾಗಲೇ ವಿಜಯಪುರದ ಆಸ್ಪತ್ರೆಗಳಲ್ಲಿ ಸೂಕ್ತ ಸಲಕರಣೆಗಳ ಕೊರತೆ ಇದೆ.. ಜಿಲ್ಲಾಸ್ಪತ್ರೆಯಲ್ಲಿ ಕೂಡಾ ಸ್ಕ್ಯಾನಿಂಗ್‌ನಂತಹ ವ್ಯವಸ್ಥೆಗಳಿಲ್ಲ.. ಈ ಕಾರಣದಿಂದಾಗಿ ಹೃದ್ರೋಗಿ ಮಕ್ಕಳು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ..
ಇದನ್ನೂ ಓದಿ; 286ಕ್ಕೂ ಹೆಚ್ಚು ಯುವತಿಯರಿಗೆ ಬ್ಲ್ಯಾಕ್‌ಮೇಲ್; ಯೂಟ್ಯೂಬರ್‌ಗೆ 17 ವರ್ಷ ಜೈಲು!