CrimeDistricts

ಮಹಿಳೆಯನ್ನು ಕೊಂದು ಶವದ ಮೇಲೆ ಅತ್ಯಾಚಾರ..!

ಮುಳಬಾಗಿಲು; ದುರುಳನೊಬ್ಬ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಭೋಗ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.. ಹೈದರಿನಗರದಲ್ಲಿ ಆಟೋ ಚಾಲಕನೊಬ್ಬ ಈ ಕೃತ್ಯ ಎಸಗಿದ್ದಾನೆ.. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..
ಆಟೋ ಚಾಲಕನಾಗಿ ಕೆಲಸ ಮಾಡುವ ಸೈಯ್ಯದ್‌ ಸೋಹೈಲ್‌ ಎಂಬಾತನೇ ಆರೋಪಿಯಾಗಿದ್ದಾನೆ.. ಈತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ.. ಅನಂತರ ಶವದ ಜೊತೆ ಸಂಭೋಗ ನಡೆಸಿದ್ದಾನೆ.. ಸೆಪ್ಟೆಂಬರ್‌ 24ರಂದು ಈ ಕೃತ್ಯ ನಡೆದಿತ್ತು.. ಅದೇ ಹೈದರಿನಗರದಲ್ಲಿ ವಾಸವಿದ್ದ 50 ವರ್ಷದ ಸುಶೀಲಮ್ಮ ಈ ಕಾಮುಕನ ಕೈಗೆ ಸಿಕ್ಕಿ ಸಾವನ್ನಪ್ಪಿದ್ದಳು.. ಅನಂತರ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..
ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಕೊಲೆ ಮಾಡಿ ನಂತರ ಶವದೊಂದಿಗೆ ಸಂಭೋಗ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.. ಮುಳಬಾಗಿಲು ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

Share Post