ಪತ್ನಿ ಮೈಮೇಲೆಲ್ಲಾ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಮೆರೆದ ಗಂಡ!
ಚಿತ್ರದುರ್ಗ(Chitradurga); ಕೆಲವು ಗಂಡಸರು ರಾಕ್ಷಸರ ರೀತಿ ವರ್ತನೆ ಮಾಡುತ್ತಾನೆ.. ಕಟ್ಟಿಕೊಂಡ ಹೆಂಡತಿಗೇ ಚಿತ್ರಹಿಂಸೆ ನೀಡುತ್ತಾರೆ.. ನರಕ ತೋರಿಸುತ್ತಾರೆ.. ಇದಕ್ಕೆ ಉದಾಹರಣೆ ಚಿತ್ರದುರ್ಗದ ಈ ಘಟನೆ.. ಇದು ಮಾನವ ಕುಲವೇ ತಲೆ ತಗ್ಗಿಸುವಂತಹ ವಿಚಾರ.. ಯಾಕಂದ್ರೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಭೀಕರವಾಗಿ ಗಾಯಗೊಳಿಸಿದ್ದಾನೆ.. ಈ ಮೂಲಕ ತನ್ನ ವಿಕೃತಿ ಮೆರೆದಿದ್ದಾನೆ..
ಇದನ್ನೂ ಓದಿ; ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಹೃದ್ರೋಗ ಹೆಚ್ಚಳ!; 5 ವರ್ಷದಲ್ಲಿ 160 ಮಕ್ಕಳ ದುರ್ಮರಣ!
ಚಿತ್ರದುರ್ಗ ಜಿಲ್ಲೆ ಮೊಣಕಾಲ್ಮೂರಿನಲ್ಲಿ ಈ ಕೃತ್ಯ ಎಸಗಲಾಗಿದೆ.. ಪತ್ನಿಯ ಶೀಲ ಶಂಕಿಸಿರುವ ನಾಗೇಶ್ ಎಂಬಾತ ತನ್ನ ಪತ್ನಿ ಪೂಜಾಳಿಗೆ ಚಿತ್ರಹಿಂಸೆ ನೀಡಲಾಗಿದೆ.. ನಾಗೇಶ್‌ಗೆ ಆತನ ತಂದೆ ಕೂಡಾ ಸಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಪೂಜಾಳ ಬಲಕೆನ್ನೆ, ಎಡಗೈ, ಬಲತೊಡೆ ಮುಂತಾದ ಜಾಗದಲ್ಲಿ ಇಸ್ತ್ರಿ ಪೆಟ್ಟಿಗೆ ಬಿಸಿ ಮಾಡಿ ಸುಡಲಾಗಿದೆ.. ಇದ್ರಿಂದಾಗಿ ಪೂಜಾ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ.. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಇದನ್ನೂ ಓದಿ; ಆ ರಾಜಕಾರಣಿಯ ಕಾಮದಾಟಕ್ಕೆ ಲೈವ್‌ನಲ್ಲೇ ಕಣ್ಣೀರಿಟ್ಟ ಖ್ಯಾತ ನಟಿ!