NationalPolitics

ಸಿದ್ದರಾಮಯ್ಯಗೆ ಹೈಕಮಾಂಡ್‌ ಹೇಳಿದ್ದೇನು?; ಆ.29ಕ್ಕೆ ಏನಾಗುತ್ತೆ..?

ನವದೆಹಲಿ(Newdelhi); ಮುಡಾ ಹಗರಣದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಮೇಲೆ ಇದೇ ಮೊದಲ ಬಾರಿಗೆ ಸಿಎಂ ಹಾಗೂ ಡಿಸಿಎಂ ದೆಹಲಿಗೆ ಭೇಟಿ ನೀಡಿದ್ದರು.. ರಾಜ್ಯಪಾಲರು ನೋಟಿಸ್‌ ಕೊಟ್ಟಾಗ ದೆಹಲಿಗೆ ಹೋಗಿ ತನ್ನದೇನೂ ತಪ್ಪಿಲ್ಲ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ, ಇವತ್ತು ಮತ್ತೆ ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನೂ ಹೈಕಮಾಂಡ್‌ ನಾಯಕರಿಗೆ ನೀಡಿದರು.. ಹೈಕಮಾಂಡ್‌ ನಾಯಕರು ಸಿದ್ದರಾಮಯ್ಯ ಪರವಾಗಿ ನಿಲ್ಲೋದಾಗಿ, ಅವರ ಕಾನೂನು ಹೋರಾಟಕ್ಕೆ ಬೆಂಬಲ ಕೊಡೋದಾಗಿ ಅಭಯ ನೀಡಿದ್ದಾರೆ.. ಇದರಿಂದಾಗಿ ಸಿದ್ದರಾಮಯ್ಯಗೆ ಮತ್ತಷ್ಟು ಧೈರ್ಯ ಬಂದಂತಾಗಿದೆ..

ಇದನ್ನೂ ಓದಿ; ನಾನು ಅಂತಹ ಕೆಲಸ ಮಾಡಿಲ್ಲ; ಲೈವ್‌ನಲ್ಲೇ ಕಣ್ಣೀರು ಹಾಕಿದ ಬರ್ರೆಲಕ್ಕ!

ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಎಲ್ಲಾ ಕಾಂಗ್ರೆಸ್‌ ಶಾಸಕರೂ ಸಿದ್ದರಾಮಯ್ಯಗೆ ಬೆಂಬಲ ಕೊಟ್ಟಿದ್ದರು.. ನಿಮ್ಮ ಪರವಾಗಿ ನಿಲ್ಲೋದಾಗಿ ಹೇಳಿದ್ದರು.. ಇದೀಗ ಹೈಕಮಾಂಡ್‌ ಕೂಡಾ ಸಿದ್ದರಾಮಯ್ಯಗೆ ಬೆನ್ನುಲುಬಾಗಿ ನಿಂತಿದೆ.. ಹೀಗಾಗಿ ಈಗ ಆಗಸ್ಟ್‌ 29ರಂದು ಹೈಕೋರ್ಟ್‌ ಏನು ತೀರ್ಪು ನೀಡುತ್ತೆ ಅನ್ನೋ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ.. ಇನ್ನು ಹೈಕಮಾಂಡ್‌ ನಾಯಕರ ಭೇಟಿ ಬಳಿಕ ಮಾತನಾಡಿರುವ ಸಿದ್ದರಾಮಯ್ಯ, ನನ್ನ ಬೆಂಬಲಕ್ಕೆ ನಿಂತ ಹೈಕಮಾಂಡ್‌ಗೆ ಧನ್ಯವಾದ ಹೇಳುತ್ತೇನೆ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ನಾವು ಎಲ್ಲಾ ವಿಚಾರಗಳನ್ನೂ ಹೈಕಮಾಂಡ್‌ಗೆ ತಿಳಿಸಿದ್ದೇವೆ. ಸಿದ್ದರಾಮಯ್ಯ ಅವರ ಪರವಾಗಿ ಇಡೀ ಪಕ್ಷ ನಿಲ್ಲುತ್ತೆ ಎಂದು ಹೇಳಿದ್ದು, ಇದು ಸಿದ್ದರಾಮಯ್ಯ ವಿರುದ್ಧದ ದಾಳಿಯಲ್ಲ, ಗ್ಯಾರೆಂಟಿಗಳ ವಿರುದ್ಧದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಇದ್ದಕ್ಕಿದ್ದಂತೆ ಮಿನಿ ವಿಮಾನ ಪತನ; ಏಳು ಮಂದಿ ದುರ್ಮರಣ!

ಇನ್ನು ಸುರ್ಜೇವಾಲಾ ಅವರು ಕೂಡಾ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್‌ ಬೀಸಿದ್ದಾರೆ.. ರಾಜ್ಯಪಾಲರು ಬಿಜೆಪಿ ಪಕ್ಷದ ಕೈಗೊಂಬೆಯಾಗಿದ್ದಾರೆ.. ಜನರು ಆಯ್ಕೆ ಮಾಡಿದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ.. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ..

Share Post