National

ಛತ್ತೀಸ್‌ಗಡದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು

ದಂತೇವಾಡಾ : ಛತ್ತೀಸ್‌ಗಡದಲ್ಲಿ ಕಬ್ಬಿಣದ ಅದಿರು ತುಂಬಿದ್ದ ಗೂಡ್ಸ್‌ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ನಕ್ಸಲ್‌ ಪೀಡಿತ ದಂತೇವಾಡಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ೧೭ ಬೋಗಿಗಳು ಹಳಿ ತಪ್ಪಿದ್ದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಅದಿರು ತುಂಬಿದ್ದ ರೈಲು ಕಿರಾಂದುಲ್‌ದಿಂದ ವಿಶಾಖಪಟ್ಟಣಕ್ಕೆ ಚಲಿಸುತ್ತಿದ್ದಾಗ ಭನ್ಸ್‌ ಮತ್ತು ಕಮಲೂರ್‌ ನಿಲ್ದಾಣಗಳ ನಡುವೆ ಮುಂಜಾನೆ 4.05ರ ವೇಳೆಗೆ ಈ ಅವಘಡ ಸಂಭವಿಸಿದೆ.

ಈ ಅವಘಡದಿಂದ ಇನ್ನಿತರ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ ಯಾಂತ್ರಿಕ ದೋಷದಿಂದ ಆಗಿರುವಂತೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post