BengaluruPolitics

ಕೋರ್ಟ್‌ ವ್ಯತಿರಿಕ್ತ ತೀರ್ಪು ಕೊಟ್ಟರೆ ಮುಂದೇನು..?; ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದ್ದೇನು..?

ಬೆಂಗಳೂರು; ಮುಡಾ ಹಗರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.. ಸಿಎಂ ಸಿದ್ದರಾಮಯ್ಯಗೆ ಕಾನೂನು ಸಂಕಷ್ಟ ಎದುರಾಗಿದೆ.. ಆಗಸ್ಟ್‌ 29ಕ್ಕೆ ಹೈಕೋರ್ಟ್‌ ಏನು ತೀರ್ಪು ನೀಡುತ್ತೆ ಎಂಬುದರ ಮೇಲೆ ಸಿದ್ದರಾಮಯ್ಯ ಭವಿಷ್ಯ ನಿಂತಿದೆ.. ಒಂದು ವೇಳೆ ಹೈಕೋರ್ಟ್‌, ರಾಜ್ಯಪಾಲರ ಆದೇಶಕ್ಕೆ ತಡೆ ನೀಡದೇ ಹೋದರೆ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ವಿಚಾರಣೆ ಎದುರಿಸಬೇಕಾಗಿ ಬರುತ್ತದೆ.. ಅಂತಹ ಪರಿಸ್ಥಿತಿ ಬಂದರೆ ಮುಂದೆ ಏನು ಮಾಡಬೇಕು..? ಹೋರಾಟ ಹೇಗಿರಬೇಕು..? ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕೇ ಬೇಡವೇ..? ಎಂಬುದು ಈಗಿರುವ ಪ್ರಶ್ನೆ.. ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಸಿದ್ದರಾಮಯ್ಯಗೆ ಹೈಕಮಾಂಡ್‌ ಹೇಳಿದ್ದೇನು?; ಆ.29ಕ್ಕೆ ಏನಾಗುತ್ತೆ..?

ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದರು.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ರಣದೀಪ್‌ ದೀಪ್‌ ಸರ್ಜೇವಾಲಾ ಸೇರಿದಂತೆ ಹಲವು ನಾಯಕರ ಚರ್ಚೆ ನಡೆಸಲಾಗಿತ್ತು.. ಈ ವೇಳೆ ಮುಡಾ ಪ್ರಕರಣದ ಮುಂದಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.. ಒಂದು ವೇಳೆ ಕೋರ್ಟ್‌ ವ್ಯತಿರಿಕ್ತವಾಗಿ ತೀರ್ಪು ನೀಡಿದರೆ ಏನು ಮಾಡಬೇಕು..? ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬೇಕೇ..? ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸುತ್ತಲೇ ಕಾನೂನು ಹೋರಾಟ ಮಾಡಬೇಕು..? ಬಿಜೆಪಿ ವಿರುದ್ಧದ ಹೋರಾಟ ಹೇಗಿರಬೇಕು..? ಸದ್ಯ ಆಗಸ್ಟ್‌ 29ರಂದು ಕಾನೂನು ಹೋರಾಟ ಹೇಗಿರುತ್ತೆ..? ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನಾನು ಅಂತಹ ಕೆಲಸ ಮಾಡಿಲ್ಲ; ಲೈವ್‌ನಲ್ಲೇ ಕಣ್ಣೀರು ಹಾಕಿದ ಬರ್ರೆಲಕ್ಕ!

ಈಗಾಗಲೇ ಹೈಕಮಾಂಡ್‌ ನಾಯಕರು ಹೇಳಿರುವಂತೆ ಕಾಂಗ್ರೆಸ್‌ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ತೀರ್ಮಾನ ಮಾಡಿದೆ.. ಸಿದ್ದರಾಮಯ್ಯ ಅವರ ಪರವಾಗಿ ನಿಂತು ದೇಶಾದ್ಯಂತ ಹೋರಾಟದ ನಡೆಸುವ ಬಗ್ಗೆಯೂ ಚರ್ಚೆಯೂ ನಡೆದಿದೆ.. ಹೀಗಾಗಿ ಆಗಸ್ಟ್‌ 29ರಂದು ಕೋರ್ಟ್‌ ಏನು ಆದೇಶ ಕೊಡುತ್ತೆ..? ಅನಂತರ ಕಾಂಗ್ರೆಸ್‌ ಹೈಕಮಾಂಡ್‌ ಏನು ತೀರ್ಮಾನ ಕೈಗೊಳ್ಳುತ್ತೆ ಎಂಬುದರ ಬಗ್ಗೆ ಕುತೂಹಲ ಶುರುವಾಗಿದೆ..

Share Post