AstrologyLifestyle

ದೇವಸ್ಥಾನದ ಸುತ್ತ ಮನೆ ಇರಬಹುದೇ..?; ಮನೆ ಇದ್ದರೆ ಏನಾಗುತ್ತೆ..?

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ವಾಸ್ತು ನೋಡಿಯೇ ಮನೆ ಕಟ್ಟಲಾಗುತ್ತಿದೆ.. ಬಾಡಿಗೆ ಮನೆಗೆ ಹೋಗುವಾಗಲೂ ವಾಸ್ತು ನೋಡಿಯೇ ನೋಡುತ್ತಾರೆ.. ಅದ್ರಲ್ಲೂ ಸಂಪ್ರದಾಯಸ್ಥ ಹಿಂದೂಗಳು ವಾಸ್ತು ನೋಡದೇ ಮನೆಗೆ ಕಾಲಿಡೋದೇ ಇಲ್ಲ.. ವಾಸ್ತು ಅಲ್ಲದೆ ಕೆಲವರಿಗೆ ದೇವಸ್ಥಾನದ ಸುತ್ತಮುತ್ತ ಮನೆ ಕಟ್ಟಬಹುದೇ ಇಲ್ಲವೇ, ದೇವಸ್ಥಾನದ ಬಳಿ ಮನೆ ಇದ್ದರೆ ಏನಾಗುತ್ತೆ ಎಂಬ ಅನುಮಾನಗಳಿವೆ.. ಅದರ ಬಗ್ಗೆ ತಿಳಿಯೋಣ ಬನ್ನಿ..

ಇದನ್ನೂ ಓದಿ; Money Plan; 21 ವರ್ಷದಲ್ಲಿ 70 ಲಕ್ಷ ಗಳಿಸುವ ಅವಕಾಶ!

ವಾಸ್ತು ತಜ್ಞರು ಹೇಳೋ ಪ್ರಕಾರ ದೇವಸ್ಥಾನದ ನೆರಳು ನಾವು ವಾಸಿಸುವ ಮನೆಯ ಮೇಲೆ ಬೀಳಬಾರದಂತೆ. ದೇವಸ್ಥಾನದಿಂದ ಕನಿಷ್ಠವೆಂದರೂ 200 ಅಡಿ ದೂರದಲ್ಲಿ ಮನೆ ಇರಬೇಕು ಎಂದು ಕೆಲ ವಾಸ್ತು ತಜ್ಞರು ಹೇಳುತ್ತಾರೆ.. ಇಲ್ಲದಿದ್ದರೆ ಮನೆಯಲ್ಲಿ ನೆಮ್ಮದಿ, ಶಾಂತಿ ಇರೋದಿಲ್ಲ ಅನ್ನೋದು ಅವರ ಅಭಿಪ್ರಾಯ.
ವಾಸ್ತು ತಜ್ಞರ ಪ್ರಕಾರ ದೇವಸ್ಥಾನದ ಮುಂಭಾಗದಲ್ಲಿ ಮನೆ ಬರದಂತೆ ನೋಡಿಕೊಳ್ಳಬೇಕು. ಅದ್ರಲ್ಲೂ ದೇಗುಲದ ಮೂಲ ವಿರಾಟಕ್ಕೆ ಅಭಿಮುಖವಾಗಿ ಮನೆ ಇರಬಾರದಂತೆ. ಆದ್ರೆ ಶಿವನ ದೇವಾಲಯಗಳ ಹಿಂಭಾಗದಲ್ಲಿ ಮನೆ ಇರಬಹುದು. ಆದ್ರೆ ಶಿವನ ದೇಗುಲದ ಬಳಿ ಮನೆ ಇದ್ದರೆ ಶತ್ರುಗಳ ಭಯ ಹೆಚ್ಚಿರುತ್ತದಂತೆ.

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಹೆಣ್ಣು ದೇವರ ದೇವಸ್ಥಾನಗಳ ಬಳಿ ಯಾವುದೇ ಮನೆಗಳು ಇರಬಾರದು. ಅಂತಹ ಮನೆಗಳಲ್ಲಿ ವಾಸಿಸುವವರು ಹೆಚ್ಚಿನ ಬೆಳವಣಿಗೆ ಹೊಂದುವುದಿಲ್ಲ. ಅಂದುಕೊಂಡು ಕೆಲಸಗಳ್ಯಾವುವೂ ನೆರವೇರುವುದಿಲ್ಲವಂತೆ. ದೇವಸ್ಥಾನದ ಧ್ವಜ ಸ್ತಂಭದ ನೆರಳು ಕೂಡ ಮನೆಯ ಮೇಲೆ ಬೀಳಬಾರದು. ಇದರಿಂದಲೂ ತೊಂದರೆಯಾಗುತ್ತದಂತೆ..

Share Post