HealthNational

ಹೆಚ್ಚು ಪ್ಯಾರಾಸಿಟಮಾಲ್‌ ಸೇವಿಸಿದರೆ ಲಿವರ್‌ ಡ್ಯಾಮೇಜ್‌!

ಬೆಂಗಳೂರು; ತಲೆನೋವು, ಜ್ವರ ಬಂದರೆ ಸಾಕು ಜನ ವೈದ್ಯರ ಬಳಿ ಹೋಗದೇ ಮೊದಲು ಪ್ಯಾರಾಸಿಟಮಾಲ್‌ ಮಾತ್ರೆ ತೆಗೆದುಕೊಳ್ಳುತ್ತಾರೆ.. ಎಲ್ಲರ ಮನೆಯಲ್ಲೂ ಈ ಮಾತ್ರೆಗಳು ಸ್ಟಾಕ್‌ ಇರುತ್ತವೆ.. ಸಣ್ಣ ಸಮಸ್ಯೆ ಉಂಟಾದರೂ ವೈದ್ಯರ ಸಲಹೆ ಇಲ್ಲದೆ ಈ ಮಾತ್ರ ತೆಗೆದುಕೊಳ್ಳುತ್ತಿರುತ್ತಾರೆ.. ಆದ್ರೆ ಈ ಮಾತ್ರೆಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ; ಈ ಕಾಗೆಗಳು ಮಾತನಾಡುತ್ತದೆ, ಹಾಡುಗಳನ್ನೂ ಹಾಡುತ್ತವೆ!

ಸುದ್ದಿ ಸಂಸ್ಥೆಯೊಂದಕ್ಕೆ ಖ್ಯಾತ ವೈದ್ಯರೊಬ್ಬರು ಸಂದರ್ಶನ ನೀಡಿದ್ದು, ಇದರಲ್ಲಿ ಪ್ಯಾರಾಸಿಟಮಾಲ್‌ ಹೆಚ್ಚಾಗಿ ಸೇವನೆ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಮಾತನಾಡಿದ್ದಾರೆ.. ಪ್ಯಾರಾಸಿಟಮಾಲ್‌ ಸೇವನೆ ಮಾಡುವುದರಿಂದ ದೇಹದಲ್ಲಿ ಗ್ಲುಟಾ ಥಯೋನ್‌ ಕಡಿಮೆಯಾಗುತ್ತದೆ.. ಗ್ಲುಟಾ ಥಯೋನ್‌ ನಮ್ಮ ಲಿವರ್‌ ಕಾಪಾಡುತ್ತದೆ.. ಆಲ್ಕೋಹಾಲ್‌ ಸೇವನೆ ಮಾಡುವವರು ಹಾಗೂ ಬೊಜ್ಜು ಇರುವವರಲ್ಲಿ ಇದು ಗ್ಲುಟಾ ಥಯೋನ್‌ ಕಡಿಮೆ ಇರುತ್ತದೆ.. ಇದರಿಂದಾಗಿ ಅವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುತ್ತವೆ.. ಅದೇ ರೀತಿ ಹೆಚ್ಚಾಗಿ ಪ್ಯಾರಾಸಿಟಮಾಲ್‌ ಸೇವನೆ ಮಾಡುವುದರಿಂದ ಲಿವರ್‌ ಮೇಲೆ ಪರಿಣಾಮ ಬೀರುತ್ತದೆ.. ಲಿವರ್‌ ವೈಫಲ್ಯಕ್ಕೆ ಕಾರಣವಾಗುತ್ತದೆ..

ಇದನ್ನೂ ಓದಿ; ಬೆಕ್ಕು ಕಚ್ಚಿ ಶಿವಮೊಗ್ಗದಲ್ಲಿ ಮಹಿಳೆ ಸಾವು!; ಬೆಕ್ಕು ಸಾಕೋ ಮುಂಚೆ ಹುಷಾರ್‌!

Share Post