ಎಂಐಎಂ ಸಂಸ್ಥಾಪಕ ಹಾಗೂ ಸಂಸದ ಅಸಾದುದ್ದಿನ್ ಓವೈಸಿ ಮನೆ ಮೇಲೆ ಕಲ್ಲು ತೂರಾಟ
ನವದೆಹಲಿ; ಹೈದರಾಬಾದ್‌ನ ಸಂಸದ ಹಾಗೂ ಎಂಐಎಂ ಸಂಸ್ಥಾಪಕ ಅಸಾದುದ್ದಿನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಓವೈಸಿಯವರು ರಾಜಸ್ಥಾನ ಪ್ರವಾಸದಲ್ಲಿದ್ದರು. ಈ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಅಸಾದುದ್ದಿನ್ ಓವೈಸಿಯವರೇ ಟ್ವೀಟ್ ಮಾಡಿದ್ದಾರೆ. ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ಮತ್ತೆ ದಾಳಿಗಳಾಗುತ್ತಿವೆ. 2014ರ ಬಳಿಕ ನಾಲ್ಕು ಬಾರಿ ನನ್ನ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಮನೆಗೆ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಓವೈಸಿ ಆಗ್ರಹ ಮಾಡಿದ್ದಾರೆ.