LifestyleNational

ಈ ಕಾಗೆಗಳು ಮಾತನಾಡುತ್ತದೆ, ಹಾಡುಗಳನ್ನೂ ಹಾಡುತ್ತವೆ!

ಆಫ್ರಿಕಾ; ಕಾಗೆ ಕಾವ್‌ ಕಾವ್‌ ಅಂತ ಕೂಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ.. ಆದ್ರೆ ಅದೇ ಕಾಗೆಗಳು ಮಾತನಾಡುತ್ತವೆ, ಹಾಡು ಹೇಳುತ್ತವೆ ಅಂದ್ರೆ ನಂಬುತ್ತೀರಾ..? ಆದ್ರೆ ನಂಬಲೇಬೇಕು.. ಪಕ್ಷಿ ತಜ್ಞರು ಕಾಗೆಗಳು ಪರಸ್ಪರ ಮಾತನಾಡುತ್ತವೆ, ಹಾಡು ಕೂಡಾ ಹಾಡುತ್ತವೆ ಅನ್ನೋದನ್ನು ಪತ್ತೆ ಹಚ್ಚಿದ್ದಾರೆ..
ಆದ್ರೆ ನಮ್ಮ ಸುತ್ತ ಮುತ್ತ ಇರುವ ಕಪ್ಪು ಕಾಗೆಗಳು ಹಾಗೆ ಮಾಡೋದಿಲ್ಲ.. ಆಫ್ರೀಕನ್‌ ದೇಶಗಳಲ್ಲಿರುವ ಪೈಡ್‌ ಎಂಬ ಕಾಗೆಗಳು ಮನುಷ್ಯರ ರೀತಿಯಲ್ಲೇ ವ್ಯವಹಾರ ನಡೆಸುತ್ತವಂತೆ.. ಅವುಗಳಿಗೇ ಒಂದು ಭಾಷೆ ಇದೆಯಂತೆ.. ಜೊತೆಗೆ ಅವು ಹಾಡು ಹಾಡುತ್ತಾ ಎಂಜಾಯ್‌ ಕೂಡಾ ಮಾಡುತ್ತವಂತೆ!

ಇದನ್ನೂ ಓದಿ; ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ!

ಈ ಪೈಡ್‌ ಕಾಗೆಗಳು ಪೂರ್ತಿ ಕಪ್ಪು ಬಣ್ಣದಲ್ಲಿರೋದಿಲ್ಲ.. ಅವುಗಳ ಕತ್ತಿನ ಸುತ್ತ ಬಿಳಿ ಬಣ್ಣ ಇರುತ್ತದೆ.. ಇವು ಇತರ ಎಲ್ಲಾ ಕಾಗೆಗಳಂತೆ ಎಲ್ಲಾ ರೀತಿಯ ಆಹಾರಗಳನ್ನೂ ಸೇವನೆ ಮಾಡುತ್ತವೆ.. ಇವು ಸಣ್ಣ ಗುಂಪುಗಳಲ್ಲಿ ಜೀವಿಸುತ್ತವೆ.. ಒಟ್ಟಿಗೆ ಆಹಾರ ಅರಸಿಕೊಂಡು ಹೋಗುತ್ತವೆ.. ಆದ್ರೆ ಕಾಗೆಗಳಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ.. ಮೂಗು ಹಾಗೂ ಕಾಲುಗಳು ಕೂಡಾ ದೊಡ್ಡದಾಗಿರುತ್ತವೆ..

ಇದನ್ನೂ ಓದಿ; ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಬಂದಿದೆ; ಯಡಿಯೂರಪ್ಪ

 

Share Post