ಗಂಡನ ಜೊತೆ ಮಲಗಬೇಕಾದರೆ ಈ ಮಹಿಳೆಗೆ ಹಣ ಕೊಡಬೇಕಂತೆ!
ತೈವಾನ್; ಗಂಡನಿಗೆ ಕಂಡೀಷನ್ ಮೇಲೆ ಕಂಡೀಷನ್ ಹಾಕುತ್ತಿದ್ದ ಮಹಿಳೆಯೊಬ್ಬಳು ಇದೀಗ ಹಾಸಿಗೆ ಹಂಚಿಕೊಳ್ಳಬೇಕಾದರೆ ಗಂಡ ಇಂತಿಷ್ಟು ಹಣ ಕೊಡಬೇಕು ಎಂದು ಕಂಡೀಷನ್ ಹಾಕಿದ್ದಾಳೆ.. ಇಷ್ಟು ಹಣ ಕೊಟ್ಟರೆ ಮಾತ್ರ ನನ್ನ ಜೊತೆ ಶೃಂಗಾರ ಮಾಡಬಹುದು.. ಇಲ್ಲದಿದ್ದರೆ ದೂರ ಮಲಗಬೇಕಾಗುತ್ತದೆ ಎಂದು ಗಂಡನಿಗೆ ಆಕೆ ಎಚ್ಚರಿಕೆ ಕೊಟ್ಟಿದ್ದಾಳೆ.. ಹೆಂಡತಿಯ ಈ ವರ್ತನೆಯಿಂದ ಬೇಸತ್ತ ಗಂಡ ಕೊನೆಗೆ ಡಿವೋರ್ಸ್ ಪಡೆದುಕೊಂಡಿದ್ದಾನೆ.. ತೈವಾನ್ ದೇಶದಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ಚನ್ನಪಟ್ಟಣ ಉಪಚುನಾವಣೆ; ಬಂಡಾಯದ ಬಾವುಟ ಹಾರಿಸ್ತಾರಾ ಸಿ.ಪಿ.ಯೋಗೇಶ್ವರ್?
ಆ ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾಗಿದ್ದವು.. ಇವರಿಗೆ ಇಬ್ಬರೂ ಮಕ್ಕಳೂ ಆಗಿದ್ದಾರೆ.. ಈ ನಡುವೆ ಗಂಡನ ದೇಹ ದಢೂತಿಯಾಗಿ ಬೆಳೆದುಬಿಟ್ಟಿದೆ.. ಇದರಿಂದಾಗಿ ಪತ್ನಿ ಗಂಡನ ಬಗ್ಗೆ ಅಸಹ್ಯಪಟ್ಟುಕೊಳ್ಳಲು ಶುರು ಮಾಡಿದ್ದಾಳೆ.. ಹಾಸಿಗೆ ಹಂಚಿಕೊಳ್ಳಲೂ ಹಿಂದೇಟು ಹಾಕಿದ್ದಾಳೆ.. ಕೊನೆಗೆ ಆಕೆ ತಿಂಗಳ ಒಂದೇ ಬಾರಿ ಮಾತ್ರ ಶೃಂಗಾರ ಎಂದು ಹೇಳಿದ್ದಾಳೆ.. ಅದಕ್ಕೂ ಗಂಡ ಒಪ್ಪಿದ್ದಾನೆ.. ಕೆಲ ದಿನಗಳಾದ ಮೇಲೆ ಆಕೆ ಮತ್ತೊಂದು ಕ್ಯಾತೆ ತೆಗೆದಿದ್ದಾಳೆ.. ನಿನ್ನ ಜೊತೆ ಶೃಂಗಾರ ಮಾಡಬೇಕಾದರೆ, ಒಂದು ಸಲಕ್ಕೆ 15 ಡಾಲರ್ ಅಂದ್ರೆ 1300 ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ..
ಇದರಿಂದ ಗಂಡನಿಗೆ ದಿಕ್ಕು ತೋಚದಂತಾಗಿದೆ.. ಕೊನೆಗೆ ಆತ ಆಕೆಯಿಂದ ಡಿವೋರ್ಸ್ ಪಡೆದು ಹೊರಬಂದಿದ್ದಾನೆ..
ಇದನ್ನೂ ಓದಿ; ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!