ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆ
ಬೆಂಗಳೂರು; ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಅಬ್ರಹಾಂ ಅವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.. ಈ ನಡುವೆ ಮತ್ತೊಂದು ದೂರನ್ನು ರಾಜ್ಯಪಾಲರಿಗೆ ನೀಡಲಾಗಿದೆ.. ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬುವವರು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಈ ದೂರು ನೀಡಲಾಗಿದೆ.. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡಾ ರಾಜ್ಯಪಾಲರಿಗೆ ನೀಡಲಾಗಿದೆ..
ಇದನ್ನೂ ಓದಿ; ಫೋರಂ ಮಾಲ್ ಬಳಿ ಯುವತಿಗೆ ಲೈಂಗಿಕ ಕಿರುಕುಳ; ನಾಲ್ವರ ಅರೆಸ್ಟ್!
ಮೈಸೂರು ಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನಿಗೆ ಸಂಬಂಧಿಸಿದ ದೂರು ಇದಾಗಿದೆ.. ಈ ಜಾಗವನ್ನು 1972ರಲ್ಲಿ ಜಿಲ್ಲಾಡಳಿತ ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ಮತ್ತು ಹಿಂದುಳಿದವರಿಗೆ ನೀಡಲು ಸ್ವಾಧೀನಪಡಿಸಿಕೊಂಡಿತ್ತು.. ಜೊತೆಗೆ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಕೂಡಾ ಹಂಚಿಕೆ ಮಾಡಲಾಗಿತ್ತು.. ಆದ್ರೆ ಫಲಾನುಭವಿಗಳು ಮೂಲಸೌಕರ್ಯ ಇಲ್ಲದ ಕಾರಣ ಅಲ್ಲಿ ಮನೆ ನಿರ್ಮಿಸಿರಲಿಲ್ಲ.. ಇದಾಗಿ 30 ವರ್ಷಗಳ ನಂತರ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಆ ಜಾಗ ಡಿನೋಟಿಫೈ ಮಾಡುವಂತೆ ಕೋರಿರುತ್ತಾರೆ.. ಆದ್ರೆ ಮಾರಪ್ಪನಿಗೂ ಆ ಜಮೀನಿಗೂ ಯಾವ ಸಂಬಂಧವೂ ಇಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ..
ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!
ಜಮೀನಿನ ಮಾಲೀಕರು ಮಾರಪ್ಪ ಅಲ್ಲದಿದ್ದರೂ ಅವರ ಹೆಸರಿಗೆ ಡಿ ನೋಡಿಫೈ ಮಾಡಿದ್ದು, ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರಿಂದ ಮಾರಪ್ಪ ಹೆಸರಿಗೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ..