DistrictsPolitics

ಡಿ.ಕೆ.ಶಿವಕುಮಾರ್‌ ಶೀಘ್ರದಲ್ಲೇ ಮಾಜಿ ಮಂತ್ರಿಯಾಗ್ತಾರೆ; ರಮೇಶ್‌ ಜಾರಕಿಹೊಳಿ

ಬೆಳಗಾವಿ; ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶೀಘ್ರದಲ್ಲೇ ಮಾಜಿ ಸಚಿವರಾಗುತ್ತಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್ ಒಬ್ಬ ಪುಕ್ಲ, ಮೋಸಗಾರ ಎಂದು ಕರೆದಿದ್ದಾರೆ. 

ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜಕಾರಣ ಹಾಗೂ ಡಿ.ಕೆ.ಶಿವಕುಮಾರ್‌ ಕಾರಣದಿಂದಾಗಿ ಸರ್ಕಾರ ಬೀಳಲಿದೆ. ಡಿ.ಕೆ.ಶಿವಕುಮಾರ್‌ ಅತಿ ಶೀಘ್ರದಲ್ಲೇ ಮಾಜಿಯಾಗಲಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದರು. ನನಗೆ ಆಗಿರುವಂತಹ ಕಷ್ಟ ಸತೀಶ್‌ ಜಾರಕಿಹೊಳಿಯವರಿಗೆ ಆಗೋದಿಲ್ಲ. ಸಿಡಿ ಮಾಸ್ಟರ್ ಡಿ.ಕೆ.ಶಿವಕುಮಾರ್‌ಗೆ ಸಿಡಿಯೇ ಶಕ್ತಿ. ಇತ್ತೀಚೆಗೆ ನೆಲಮಂಗಲದ ಮಾಜಿ ಶಾಸಕ ನಾಗರಾಜ್‌ಗೆ  ಮಾಜಿ ಶಾಸಕರೊಬ್ಬರ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

 

Share Post