BengaluruCrime

ಪೊಲೀಸರಿಂದಲೇ ಸುಲಿಗೆ ಮಾಡುತ್ತಿದ್ದ ಚಾಲಾಕಿ ಕಳ್ಳ ಅರೆಸ್ಟ್‌!

ಬೆಂಗಳೂರು;‌ ಪೊಲೀಸರ ವಿರುದ್ಧವೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ಪೊಲೀಸರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.. ಸೈಯದ್‌ ಸರ್ಫರಾಜ್‌ ಎಂಬಾತನೇ ಸಿಕ್ಕಿಬಿದ್ದಿರುವ ಆರೋಪಿಯಾಗಿದ್ದಾನೆ.. ಈತ ಬೆಂಗಳೂರು ನಗರದ ಪೂರ್ವ ವಿಭಾಗದ ಹಲವು ಠಾಣೆಗಳ ಪೊಲೀಸರಿಂದಲೇ ಹಣ ಸುಲಿಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

ಪೊಲೀಸ್‌ ಠಾಣೆಯಲ್ಲಿ ಲಾಕಪ್‌ನಲ್ಲಿರುವ ಆರೋಪಿಗಳನ್ನು ಹೇಗೋ ಪರಿಚಯ ಮಾಡಿಕೊಂಡು, ಅವರ ಕೇಸ್‌ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ.. ಅನಂತರ ಕಾನೂನು ಬಾಹಿರವಾಗಿ ಲಾಕಪ್‌ನಲ್ಲಿಡಲಾಗಿದೆ ಎಂದು ಪೊಲೀಸರ ವಿರುದ್ಧವೇ ಆರೋಪಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತಿದ್ದ.. ನಂತರ ದೂರು ವಾಪಸ್‌ ಪಡೆಯಲು ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ..
ಬಂಧಿತ ಆರೋಪಿಗಳಿಗೂ ಈ ಸೈಯದ್‌ ಸರ್ಫರಾಜ್‌ಗೂ ಯಾವ ಸಂಬಂಧವೂ ಇಲ್ಲ.. ಆದ್ರೂ ಕೂಡಾ ಸುಲಿಗೆ ಮಾಡಲು ಪೊಲೀಸರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ.. ಸಂಬಂಧವಿಲ್ಲದ ಬಂಧಿತ ಆರೋಪಿಗಳ ಪರವಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಪೊಲೀಸರನ್ನೇ ಸುಲಿಗೆ ಮಾಡಲು ಹೊರಟಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಫೋರಂ ಮಾಲ್‌ ಬಳಿ ಯುವತಿಗೆ ಲೈಂಗಿಕ ಕಿರುಕುಳ; ನಾಲ್ವರ ಅರೆಸ್ಟ್‌!

ಇತ್ತೀಚೆಗೆ ಶಿವಾಜಿನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರೈಂ ನಂಬರ್‌ 82ರ ಸಂಬಂಧ ಬಂಧಿತನಾಗಿದ್ದ ವ್ಯಕ್ತಿಯ ಪರವಾಗಿ ಈತ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದ.. ಅನಂತರ ಶಿವಾಜಿನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ 50 ಸಾವಿರ ರೂಪಾಯಿ ಕೊಡುವಂತೆ ಡಿಮ್ಯಾಂಡ್‌ ಇಟ್ಟಿದ್ದ ಎನ್ನಲಾಗಿದೆ.. ಈ ಸಂಬಂಧ ಹಣ ಕೊಡುತ್ತೇವೆ ಎಂದು ಕರೆದು ಆರೋಪಿಯನ್ನು ಬಂಧಿಸಲಾಗಿದೆ.. ಈ ಹಿಂದೆ 30ಕ್ಕೂ ಅಧಿಕ ಕಡೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ..

Share Post